ಕವಿತೆ: ನಿರಾಳತೆಯ ನಿಜದದಿರು

– ವಿನು ರವಿ.

greediness, life, happiness, ಬದುಕು, ನೆಮ್ಮದಿ, ಅತಿ ಆಸೆ

ಉರಿಯುವ ಸೂರ‍್ಯನ
ಒಡಲಾಳದೊಳಗೆಲ್ಲೊ
ತಣ್ಣನೆಯ ಚಂದ್ರಿಕೆಯಿದೆ

ಹರಿಯುವ ನೀರಿನ
ತಳದಾಳದಲ್ಲೆಲ್ಲೊ
ಕೆಸರಿನ ಹಸಿತನವಿದೆ

ಸ್ತಿರವಾದ ಬೆಟ್ಟದ
ಎದೆಯಾಳದಲ್ಲೆಲ್ಲೊ
ಕೊರಕಲುಗಳ ಸಡಿಲತೆ ಇದೆ

ಬಯಕೆಯ ಕನವರಿಕೆಯ
ಒಳಗೆಲ್ಲೊ ಶಾಂತಿಯ
ಬಿತ್ತಿಪತ್ರವಿದೆ

ಶೀತಲ ಚಂದಿರನ
ಮೊಗದೊಳಗೆಲ್ಲೊ
ವಿಕಲತೆಯ ಕಳೆಯಿದೆ

ಮೇಲ್ನೋಟದ ಪದರು
ಕಳಚಿದಂತೆಲ್ಲಾ
ಕಾಣಬಹುದೆ
ನಿರಾಳತೆಯ ನಿಜದದಿರು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ತುಂಬ ಚೆನ್ನಾಗಿದೆ

ಅನಿಸಿಕೆ ಬರೆಯಿರಿ: