ಕವಿತೆ: ಏಕೆ?

– ಶಿವಮೂರ‍್ತಿ. ಹೆಚ್. ದಾವಣಗೆರೆ.

ಕೇಳ್ವಿ, ಪ್ರಶ್ನೆ. ಯಾರು, Who, question ಏಕೆ, why

ಮೂರು ದಿನದ ಬಾಳಲ್ಲಿ
ಇರುವಶ್ಟು ದಿನ ನಾವಿಲ್ಲಿ
ಹಾರಾಟ ಚೀರಾಟವೇಕೆ?

ಆರು ಮೂರಡಿಯ ಮಣ್ಣಿಗೆ
ಅವರಿವರದು ತನ್ನದೆಂದು
ಬರಿಗೈಲಿ ಹೋಗುವುದೇಕೆ?

ಉಸಿರಿರುವವರೆಗೆ ಜಗದಲಿ
ಹೆಸರು ಗಳಿಸಲು ಹೋರಾಡಿ
ಹೆಸರು ಹೆಣವೆಂದಾಗುವುದೇಕೆ?

ನಶ್ವರ ದೇಹದ ವ್ಯಾಮೋಹದಿ
ಈಶ್ವರನ ಮರೆತು ಮೆರೆದಾಡಿ
ವಿಶ್ವದಿಂದಲೇ ಕಣ್ಮರೆಯಾಗುವೇಕೆ?

ಪ್ರಕ್ರುತಿ ಮಾತೆಯ ಕೂಸಾಗಿ
ಸಂಸ್ಕ್ರುತಿ ಸಂಸ್ಕಾರದಿ ಬಾಳಿ
ಸದ್ಗತಿಯ ಪಡೆಯಬಾರದೇಕೆ?

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: