ಕವಿತೆ: ಯಾಕೋ ಮನಸು ಬಾರ

– ವಿನು ರವಿ.

ಸೋಲು, Lost

ಏನೋ ಬೇಸರ
ಯಾಕೋ ಮನಸು ಬಾರ

ಕಾರ‍್ಮೋಡದ ಕಪ್ಪೆಲ್ಲಾ
ಕಣ್ಣೊಳಗೆ ಇಳಿದಂತೆ
ಮಳೆ ಹನಿಯ ತಂಪೆಲ್ಲಾ
ಎದೆಯೊಳಗೆ ತಣ್ಣಗೆ ಕೊರೆದಂತೆ
ಏನೋ ಬೇಸರ
ಯಾಕೋ ಮನಸು ಬಾರ

ಗಾಳಿಯ ಮೊರೆತವೆಲ್ಲಾ
ವಿಶಾದ ಗೀತೆ ಹಾಡಿದಂತೆ
ಗಾಡವಾದ ಕತ್ತಲೆಲ್ಲಾ
ಬಣ್ಣವಿಲ್ಲದ ನೆರಳ ಚಿತ್ರದಂತೆ
ಏನೋ ಬೇಸರ
ಯಾಕೋ ಮನಸು ಬಾರ

ಬರೆದ ಪದಗಳೆಲ್ಲಾ
ನೆನಪಿನ ಸುಳಿಯಲ್ಲಿ ಸಿಲುಕಿದಂತೆ
ತೋರಿದ ಪ್ರೀತಿಯೆಲ್ಲಾ
ಮಬ್ಬೊಳಗೆ ಮುಸುಕಿದಂತೆ
ಏನೋ ಬೇಸರ
ಯಾಕೋ ಮನಸು ಬಾರ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: