ಶ್ಯಾವಿಗೆಯಿಂದ ಒಂದು ಸಿಹಿ
– ಸವಿತಾ.
ಬೇಕಾಗುವ ಸಾಮಾನುಗಳು
- ತೆಳು ಶ್ಯಾವಿಗೆ – 1 ಬಟ್ಟಲು
- ತುಪ್ಪ – 4 ಚಮಚ
- ಹಾಲು – ಅರ‍್ದ ಲೀಟರ್
- ಕಾರ‍್ನ್ ಪ್ಲೋರ್ – 3 ಚಮಚ
- ಸಕ್ಕರೆ ಅತವಾ ಬೆಲ್ಲ – ಮುಕ್ಕಾಲು ಬಟ್ಟಲು
- ಅರಿಶಿಣ ಪುಡಿ – ಕಾಲು ಚಮಚ
- ಬಾದಾಮಿ – 6
- ಗೋಡಂಬಿ- 8
- ಏಲಕ್ಕಿ – 4
ಮಾಡುವ ಬಗೆ
ಮೊದಲಿಗೆ ತುಪ್ಪವನ್ನು ಬಾಣಲೆಗೆ ಹಾಕಿ, ಬಿಸಿ ಮಾಡಿ ನಂತರ ಶ್ಯಾವಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಸಕ್ಕರೆಪುಡಿ ಮೂರು ಚಮಚ ಮತ್ತು ನೀರು ಮೂರು ಚಮಚ ಹಾಕಿ ಚೆನ್ನಾಗಿ ಹುರಿದು ಒಲೆ ಆರಿಸಿ ತೆಗೆದಿಡಿ. ಆಮೇಲೆ ಹಾಲು ಕಾಯಿಸಿ , ಹೀಗೆ ಕಾಯಿಸಿದ ಹಾಲನ್ನು ಕಾರ‍್ನ್ ಪ್ಲೋರ‍್ಗೆ ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಕಲಸಿ ನಂತರ ಮತ್ತೆ ಕುದಿಯಲು ಇಟ್ಟು, ಗಟ್ಟಿ ಆಗುವವರೆಗೆ ಕುದಿಸಿಕೊಳ್ಳಬೇಕು. ಆಮೇಲೆ ಇದಕ್ಕೆ ಸಕ್ಕರೆ ಸೇರಿಸಿ ಕುದಿಸಿ ಇಳಿಸಿಕೊಳ್ಳಬೇಕು. ನಂತರ ಇದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಇನ್ನೊಮ್ಮೆ ಚೆನ್ನಾಗಿ ತಿರುಗಿಸಬೇಕು. ಒಂದು ಚೌಕಾಕಾರದ ಸ್ಟೀಲ್ ಡಬ್ಬಿಗೆ ಹುರಿದ ಶ್ಯಾವಿಗೆ ಹರಡಿ ಜೊತೆಗೆ ಕಾರ‍್ನ್ ಪ್ಲೋರ್ ಮಿಶ್ರಣ ಹಾಕಿ. ನಂತರ ಮತ್ತೆ ಹುರಿದ ಶ್ಯಾವಿಗೆ, ಗೋಡಂಬಿ ಚೂರು ಮತ್ತು ಬಾದಾಮಿಯನ್ನು ಅದರ ಮೇಲೆ ಹಾಕಿ . ಇದು ಹೊಂದಿಕೊಳ್ಳಲು ಅರ‍್ದ ಗಂಟೆ ಬಿಡಬೇಕು. ಆಮೇಲೆ ಚೌಕಾಕಾರದಲ್ಲಿ ಕತ್ತರಿಸಿ. ಈಗ ಸಿಹಿಯಾದ ಸೇಮಿಯಾ ತಯಾರಾಗಿದೆ. ಸಿಹಿ ಸೇಮಿಯಾ ಹೆಚ್ಚಾಗಿ ಈದ್ ಹಬ್ಬದಂದು ಮಾಡುವಂತಹ ಸಿಹಿ ತಿನಿಸಾಗಿದೆ.
ಇತ್ತೀಚಿನ ಅನಿಸಿಕೆಗಳು