ಆಲೂ ದಮ್

– ಸವಿತಾ.

ಬೇಕಾಗುವ ಸಾಮಾನುಗಳು

  • ಈರುಳ್ಳಿ – 2
  • ಟೊಮೊಟೊ – 3
  • ಎಣ್ಣೆ – 5 ಚಮಚ
  • ಗೋಡಂಬಿ – 5 ರಿಂದ 6
  • ಮೊಸರು – 2 ಚಮಚ
  • ಕೆನೆ – 2 ಚಮಚ
  • ಸಣ್ಣ ಅಳತೆ ಆಲೂಗಡ್ಡೆ – 6
  • ಬೆಳ್ಳುಳ್ಳಿ ಎಸಳು – 6
  • ಹಸಿ ಶುಂಟಿ – ಕಾಲು ಇಂಚು
  • ಒಣ ಕಾರದ ಪುಡಿ – 2 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ ಸ್ವಲ್ಪ
  • ಸಕ್ಕರೆ – 1 ಚಮಚ
  • ಮಾವಿನ ಕಾಯಿ ಪುಡಿ – ಕಾಲು ಚಮಚ ಅತವಾ ನಿಂಬೆ ರಸ
  • ಕಸ್ತೂರಿ ಮೇತಿ – ಅರ‍್ದ ಚಮಚ
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಸಾಸಿವೆ – ಕಾಲು ಚಮಚ
  • ಜೀರಿಗೆ – ಕಾಲು ಚಮಚ

ಮಾಡುವ ಬಗೆ

ಮೊದಲಿಗೆ ಈರುಳ್ಳಿ ಮತ್ತು ಟೊಮೋಟೋವನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ ಇವುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಗೆಯಿರಿ. ಸ್ವಲ್ಪ ಗೋಡಂಬಿ, ಮೊಸರು ಕೆನೆ ಹಾಕಿ ಮಿಕ್ಸರ್‍‍ನಲ್ಲಿ ರುಬ್ಬಿಟ್ಟುಕೊಳ್ಳಿ. ಆಲೂಗಡ್ಡೆಗಳನ್ನು ಕುದಿಸಿ ಸಿಪ್ಪೆ ತೆಗೆದು ನಂತರ, ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಗೆದಿಡಬೇಕು. ಈಗ ಮತ್ತೊಮ್ಮೆ ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಸಾಸಿವೆ, ಜೀರಿಗೆ, ಬೆಳ್ಳುಳ್ಳಿ ಮತ್ತು ಶುಂಟಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು.ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಇನ್ನಶ್ಟು ಹುರಿದು ಒಣ ಕಾರದ ಪುಡಿ, ಉಪ್ಪು, ಅರಿಶಿಣ ಮತ್ತು ಆಲೂಗಡ್ಡೆ ಹಾಕಿ ಸ್ವಲ್ಪ ನೀರು ಬೆರೆಸಿ ಒಂದು ಕುದಿ ಕುದಿಸಬೇಕು. ಸ್ವಲ್ಪ ಆಮ್ ಚೂರ್ ಪುಡಿ(ಮಾವಿನ ಕಾಯಿ ಪುಡಿ) ಅತವಾ ನಿಂಬೆ ರಸ, ಸ್ವಲ್ಪ ಕಸ್ತೂರಿ ಮೇತಿ ಮತ್ತು ಬೇಕಾದಲ್ಲಿ ಸ್ವಲ್ಪ ಸಕ್ಕರೆ ಹಾಕಿ ಚೆನ್ನಾಗಿ ತಿರುಗಿಸಿ ಒಲೆ ಆರಿಸಿ ಇಳಿಸಿಕೊಳ್ಳಬೇಕು. ನಂತರ ಕೊತ್ತಂಬರಿ ಸೊಪ್ಪು ಕತ್ತರಿಸಿ ಮೇಲೆ ಹಾಕಿಕೊಳ್ಳಬೇಕು. ಈಗ ಆಲೂ ದಮ್ ಸವಿಯಲು ಸಿದ್ದವಾಗಿದೆ. ಇದು ಪಂಜಾಬಿ ಶೈಲಿಯ ಅಡುಗೆಯಾಗಿದ್ದು, ರೊಟ್ಟಿ, ಚಪಾತಿ ಮತ್ತು ಅನ್ನದ ಜೊತೆ ತಿನ್ನಲು ರುಚಿಯಾಗಿರುತ್ತದೆ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: