ಕವಿತೆ: ಇರಲಿ ಕನ್ನಡ ಬಿಡೆನೆಂಬ ಚಲ

– ವಿನು ರವಿ.

ಚಿನ್ನ, ರನ್ನ ಕನ್ನಡ ಮಾತೆ ಚೆನ್ನ
ಅನುದಿನವೂ ಮುದ್ದಾಗಿ
ಕನ್ನಡ ಮಾತಾಡೆ ಬಲು ಚೆನ್ನ

ಪಂಪ, ರನ್ನ ಬರೆದ ಕಾವ್ಯ
ಕುವೆಂಪು, ಬೇಂದ್ರೆ ಹಾಡಿದ ಕವನ
ಕೇಳತಿರುವೆಯಾ ನೀನು
ಕನ್ನಡ ಜೇನಿನ ದನಿಯಾ

ಹಂಪೆಯ ವೈಬವ, ಬೇಲೂರಿನ ಕಲೆಯಾ
ಕಾವೇರಿ ನದಿಯ,ಜೋಗದ ಸಿರಿಯಾ
ನೋಡಿರುವೆಯಾ ನೀನು
ಕನ್ನಡ ನಾಡಿನ ಚಂದನ ಗುಡಿಯಾ

ಗಾದೆ, ಒಗಟು, ಕತೆಗಳ ಬಂದ
ಜನಪದರ ಮಾತೆ ಬಲು ಚೆಂದ
ನಿನ್ನಯ ನೆಲದಲಿ ನಿನಗೆ ಬಲ
ಇರಲಿ ಕನ್ನಡ ಬಿಡೆನೆಂಬ ಚಲ

(ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: