ಕವಿತೆ: ಹೊಸ ಹುರುಪು

ಶ್ಯಾಮಲಶ್ರೀ.ಕೆ.ಎಸ್.

ಬೇಕೆಮಗೆ ಹೊಸ ಉತ್ಸಾಹ
ಚಿವುಟಿದ ಆಸೆಗಳ ಚಿಗುರಿಸಲು
ಚಿತ್ತ ಚಂಚಲತೆಯ ದಮನಿಸಲು
ಕಮರಿದ ಕನಸುಗಳ ನನಸಾಗಿಸಲು
ಕೈಗೆಟುಕುವ ಆಸೆಗಳ ಪೂರೈಸಲು

ಬೇಕೆಮಗೆ ಹೊಸ ಉಲ್ಲಾಸ
ನುಸುಳುವ ನೋವುಗಳ ತಡೆಹಿಡಿಯಲು
ನಲುಗುವ ಕಹಿ ನೆನಪುಗಳ ಮರೆಯಲು
ದಣಿದ ಮನವ ಸಂತೈಸಲು
ದಿಕ್ಕೆಟ್ಟ ಬದುಕಿನ ಗುರಿ ತಲುಪಲು

ಬೇಕೆಮಗೆ ಹೊಸ ಹುಮ್ಮಸ್ಸು
ಮದುರ ಬಾವಗಳಿಗೆ ದನಿಯಾಗಲು
ಮನಸ್ಸಿನ ಅಸ್ಪಶ್ಟತೆಗೆ ಸ್ಪಶ್ಟನೆ ನೀಡಲು
ಕುಹಕಗಳಿಗೆ ಕುಗ್ಗದಿರಲು
ಕಣ್ಣಂಚಿನ ಕಂಬನಿ ಕರಗಿಸಲು

ಬೇಕೆಮಗೆ ಹೊಸ ಹುರುಪು
ಹಳೆಯ ಬರವಸೆಗಳಿಗೆ ಬಲವ ನೀಡಲು
ನಿರೀಕ್ಶೆಗಳನ್ನ ನನಸಾಗಿಸಲು
ಹೊಸ ಅಪೇಕ್ಶೆಗಳ ಈಡೇರಿಸಲು
ಹೊಸ ಹರುಶದ ಹೊಸ ವರುಶಕ್ಕೆ ಸ್ವಾಗತ ಕೋರಲು

(ಚಿತ್ರ ಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks