ಕವಿತೆ: ಬೆಡಗಿ ಇನ್ನಾದರೂ ನಿನ್ನೊಲವ ಕೊಡಬಲ್ಲೆಯಾ

– ನಿತಿನ್ ಗೌಡ

ಇಬ್ಬನಿ

ಮುಂಜಾನೆಯ ಇಬ್ಬನಿಯ ಮೇಲಿನ
ಹೊಳೆಯುವ ನೇಸರ ನೀ
ನನ್ನ ಕನಸಿನ ಲೋಕಕ್ಕೆ ಕೀಲಿ
ನಿನ್ನ ಆ‌‌‌ ಮುಗುಳು ನಗೆ

ನಿದ್ದೆಯ ಮಂಪರಿನಲ್ಲೂ
ಬಡಬಡಿಸುವ ಹೆಸರು‌ ನೀ
ನನ್ನ ಮೌನದಲ್ಲಿ
ಹುದುಗಿರುವ ಗದ್ದಲ‌ ನೀ

ಬಂದಿಯಾದೆ ನಾ ನಿನ್ನ ಒಲವ ಪಾಶದಲಿ
ಬಿಡುಗಡೆ ಬೇಕಿಲ್ಲ ಕೊನೆತನಕ‌ ನನಗಿಲ್ಲಿ
ಇರುಳ ಜೊತೆ  ತಿಂಗಳ ಸಾಂಗತ್ಯ ಅದು ಚೆಂದ
ಎನ್ ಜೊತೆ ನಿನ್ನ ಸಾಂಗತ್ಯ ಅದು ನಮ್ಮ ನಲ್ಬಂದ

ಎನ್ಮನದಲ್ಲಿನ ಇರುಳ ಬೆಳಗಲು ನಿನ್ನೊಲವ ದೀವಿಗೆ ಬೇಕಿಂದು
ನಿನ್ ಕನಸ ಜೊತೆಗಿರುವೆ ಎನ್ ಮನವ ನೀ ವರಿಸೇ
ನಿನ್ನ ಅರಸಿ ಮಿಡಿಯುತಿದೆ ನನ್ನರಸಿ ಈ ಹ್ರುದಯ
ಬೆಡಗಿ ಇನ್ನಾದರೂ ನಿನ್ನೊಲವ ಕೊಡಬಲ್ಲೆಯಾ

ಹೆಜ್ಜೆ ಹೆಜ್ಜೆಗೂ ಜೊತೆಯಾಗುವೆ ನಿನಗಿಂದು
ಲಜ್ಜೆಯ ಬಿಟ್ಟು ಕೋರುತಿರುವೆ ನಾನಿಂದು
ನಮ್ಮಿಬ್ಬರ ಬಂದಕೆ ನಿನ್ನಣತಿ ಹೇಳೆಂದು?
ಸಜ್ಜಾಗಬೇಕಿದೆ ಬಾಳಪಯಣಕೆ ಮುಂದು

 

(ಚಿತ್ರಸೆಲೆ:  pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: