ಕವಿತೆ: ದೇವರ ಅರಸುತ್ತಾ

– ರಾಮಚಂದ್ರ ಮಹಾರುದ್ರಪ್ಪ.

ದೇವರೆಂದರೆ ಗುಡಿಯಲ್ಲಿರುವ ಕಲ್ಲು ಮೂರ‍್ತಿಯಲ್ಲ
ದೇವರೆಂದರೆ ಮಸೀದಿಯಲ್ಲಿರುವ ಗೋಡೆಯಲ್ಲ
ದೇವರೆಂದರೆ ಚರ‍್ಚಿನಲ್ಲಿರುವ ಶಿಲುಬೆಯಲ್ಲ
ಮತ್ಯಾವುದೋ ಪ್ರಾರ‍್ತನೆಯ ಎಡೆಯಲ್ಲಿ ದೇವರಿಲ್ಲ!
ದೇವರಂದರೆ ಒಂದು ನಂಬಿಕೆ
ದೇವರನ್ನೋದು ಮನುಜನ ಅದ್ಬುತ ಕಲ್ಪನೆಯಶ್ಟೇ!
ಕೇಡು ಬಗೆಯುವ ಮನುಜ ಎಲ್ಲೆ ಮೀರದಿರಲಿ
ಅವನೊಂದು ಅಂಕೆಯಲ್ಲಿರಲಿ!
ಅಂಜಿಕೆಯಿರಲಿ ಎಂದೇ ಹುಟ್ಟುಹಾಕಿದ ದೇವರನ್ನ!
ಪ್ರಕ್ರುತಿಯಶ್ಟೇ ದೇವರು!
ನಮ್ಮ ಹಸಿವು ನೀಗಿಸುವ ಅನ್ನ ದೇವರು
ನಮ್ಮ ದಾಹ ತೀರಿಸುವ ನೀರು ದೇವರು
ಒಳಿತು ಮಾಡುವ ಎಲ್ಲರೂ ದೇವರು.
ದೇವರೆಂದರೆ ಕೇಡು ಬಗೆಯದ ಒಂದು ಶಕ್ತಿ
ಕಣ್ಣಿಗೆ ಕಾಣುವವರಲ್ಲಿ ದೇವರನ್ನು ಕಾಣು
ಕಣ್ಣಿಗೆ ಕಾಣುವವಶ್ಟೇ ಸತ್ಯ
ಕಣ್ಣಿಗೆ ಕಾಣದ ದೇವರೆಂದೆಂದಿಗೂ ಮಿತ್ಯ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: