ಕವಿತೆ: ಒಮ್ಮೆ ನಕ್ಕು ಬಿಡು

– ವೆಂಕಟೇಶ ಚಾಗಿ.

ಒಲವು, Love

ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು
ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು

ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು
ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು ಬಿಡು

ಬಂಗಾರಕ್ಕೂ ನಿಲುಕುದ ಸುಂದರ ಒಡವೆ ನೀನು
ವೈಯಾರದ ಶ್ರುಂಗಾರವು ಮಿನುಗುತಿದೆ ಒಮ್ಮೆ ನಕ್ಕು ಬಿಡು

ಕಲ್ಪನೆಯ ಹೂದೋಟದಿ ಅರಳಿರುವ ಪುಶ್ಪ ನೀನು
ದುಂಬಿಯು ಮದು ಹೀರುತಿದೆ ಒಮ್ಮೆ ನಕ್ಕು ಬಿಡು

ಏಕಾಂತದ ಸಮಯದಲಿ ಈ ಕವಿಯ ಸಂಗಾತಿ ನೀನು
ಕವನವೊಂದು ಮೂಡಿಬರುತ್ತಿದೆ ಒಮ್ಮೆ ನಕ್ಕು ಬಿಡು

( ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: