ಕವಿತೆ: ಪ್ರೀತಿಯ ಆರಾದಕರು

– ಸವಿತಾ.

ಪ್ರೀತಿಸದವರನ್ನು ದ್ವೇಶಿಸಲೂ
ಕಾರಣವಿಲ್ಲ
ಪ್ರೀತಿಸಲು ಸಂಬಂದವೊಂದನ್ನು
ಬಿಟ್ಟರೇ ಬೇರ‍್ಯಾವ ಸಾಮ್ಯತೆಯೂ ಇಲ್ಲ

ಬದುಕಿನ ಪ್ರೀತಿಯೇ ವಿಚಿತ್ರ
ಬಯಸಿದ್ದು ಸಿಗುವುದಿಲ್ಲ
ಸಿಕ್ಕಿದ್ದು ಸಂತಸ ಕೊಡುವುದಿಲ್ಲ
ಕೊನೆಗೆ ದುಡ್ಡೊಂದು ಆಳುತಿದೆ

ದುಡ್ಡಿನ ನಡುವೆ ಪ್ರೀತಿ ಪ್ರೇಮದ
ಬಾವನೆಗಳು ಬದಲಾಗುತ್ತವೆ
ಇಮೋಜಿ-ಚಿತ್ರಗಳ ಕಂಡು
ಸುಕ ದುಕ್ಕ ಪಟ್ಟಂತೆ

ನಿಜ ಪ್ರೀತಿ ಎಲ್ಲೋ ಮರೆಯಾಗಿ
ದಹದಹಿಸಿದಂತೆ
ಆದರಿಂದಿಗೂ ಪ್ರೀತಿಯರಸಿ
ಜನ ಹುಚ್ಚರಂತೆ, ಮುಗಿ ಬೀಳುವವರೇ
ಇವರೇ ಪ್ರೀತಿಯ ಆರಾದಕರು

(ಚಿತ್ರ ಸೆಲೆ: pxhere.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications