ಕವಿತೆ: ಮೈಸೂರು ದಸರಾ
ಹೊರಟನೀಗ ನಮ್ಮ ಪುಟ್ಟನು ಮೈಸೂರು ದಸರಾ ನೋಡಲು,
ನಾಡಹಬ್ಬದ ಕನಸು ಕಂಡವನು ಸಂಸ್ಕ್ರುತಿಯ ಕಣ್ಣಾರೆ ಕಾಣಲು!
ಅಪ್ಪನ ಕೇಳಿ ರೊಕ್ಕವ ಪಡೆದನು ಬೇಕಾದದ್ದನ್ನು ತೆಗೆದುಕೊಳಲು,
ಅಜ್ಜನ ಹೆಗಲೇರಿ ನಗುತ ಕುಳಿತನು ಜಂಬೂ ಸವಾರಿಯಲಿ ಮೆರೆಯಲು!
ಬಣ್ಣ ಬಣ್ಣದ ಗೊಂಬೆಗಳ ಕಂಡನು ಪೀಪಿಯ ಕೊಂಡನು ಊದಲು,
ಅರಮನೆ ಮುಂದೆ ಬೀಗಿನಿಂತನು ದೊರೆಯಂತೆ ತಾನೇ ಮೆರೆಯಲು!
ಚಾಮುಂಡಿಗೆ ಕೈಯ ಮುಗಿದನು ಬೇಡುತ ವರವನು ಕೊಡಲು,
ವಸ್ತು ಪ್ರದರ‍್ಶನಕೆ ನಿಬ್ಬೆರಗಾದನು ಹಲವು ಅಚ್ಚರಿಗಳು ತೋರಲು!
ನಾಡ ದೊರೆಗೆ ಬಲೇ ಎಂದನು ಸಂಪ್ರದಾಯವ ಪಾಲಿಸುತಿರಲು,
ನಾಡಿನೊಳಿತಿಗೆ ತಾ ಬೇಡಿದನು ಸುಬಿಕ್ಶೆಯ ಕಾಲವು ಬರಲು!
ಸ್ತಬ್ದ ಚಿತ್ರಗಳಿಗೆ ಕುಣಿದಾಡಿದನು ಬಗೆಬಗೆ ಕುತೂಹಲಗಳಿರಲು,
ಚಿನ್ನದ ಅಂಬಾರಿಗೆ ಕೇಕೆ ಹಾಕಿದನು ಮುದದಿ ಮದಗಜ ಹೊತ್ತುಸಾಗಲು!
(ಚಿತ್ರಸೆಲೆ: flickr.com )
ಚೆಂದದ ಮಕ್ಕಳ ಕವನ 👌🏽👌🏽👌🏽