ಚುಟುಕುಗಳು

– ಕಿಶೋರ್ ಕುಮಾರ್.

*** ಕೊರಗು ***

ಇಂದೇಕೆ ನಾಳೆಯ ಕೊರಗು
ನಾಳೆ ಮರಳಿಸುವುದೇ ಈ ನಾಳ ?
ಮುಂದೇನೋ ಎಂದು ಮರುಗದೆ
ನಲಿಯುತ ನೋಡು ಇಂದಿನ ಬಾಳ

 

 *** ದಣಿವು ***

ಮಲಗಿದ್ದು ಸಾಕು ಎದ್ದೇಳು ಪುಟಿದು
ಈ ವಯಸಲಿ ಲೆಕ್ಕವೇ ಈ ದಣಿವು ?
ಚಿಂಗಾರಿಯಂತೆ ಓಡು ನೀ ಮುಂದೆ
ದಣಿವಾರಲು ಬರುತಿದೆ ಆ ಮುಪ್ಪು ಮುಂದೆ

 

*** ಕನಸು ***

ಕಾಣಲು ಕನಸ ಬೇಕೇನು ದುಡ್ಡು
ಹಾಗಿದ್ದಮೇಲೆ ಅಲ್ಲೇಕೆ ಬಡತನ ?
ಕನಸುಗಳು ಸಹ ಕಟ್ಟಿವೆ ಸಾಮ್ರಾಜ್ಯಗಳ
ಕಾಣುತಲಿರು ಕನಸುಗಳ, ಮೀರು ಎಲ್ಲೆಗಳ

 

*** ಗುಟ್ಟು ***

ಗುಟ್ಟೆಂದ ಮೇಲೆ ಹೇಳುವುದೇಕೆ ಇನ್ನೊಬ್ಬರಿಗೆ
ನಿನ ಬಾಯಲ್ಲೇ ನಿಲಲಿಲ್ಲ, ಇನ್ನು ಹಂಗೇಕೆ ಅವರಿಗೆ
ಆಡಿದ ಮಾತನ್ನು ಕಟ್ಟಿ ಹಾಕಬಹುದೇ
ಆಡುವ ಮುನ್ನ ಯೋಚಿಸಿ, ಮಾತಾಡದೆ ಇರಬಹುದೇ ?

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: