ಕವಿತೆ:ಮುಂಗಾರು ಬರುತೈತೆ

– ಮಹೇಶ ಸಿ. ಸಿ.

ಮಳೆ-ಹಸಿರು, Rain-Green

ಚದುರಿರುವ ಮೋಡಗಳು
ಒಂದಾಗುವ ಕಾಲ,
ನೋಡು ಎಲ್ಲಿಂದಲೋ
ಬಂದ ಕಪ್ಪನೆಯ ಮೋಡ

ಮೇಗ ಮೇಗವ ರಮಿಸೆ
ಹಾಯ್ದು ಹೋಗುವ ಮಿಂಚು,
ಕಿವಿ ಕೊರೆಯುವ ಗುಡುಗಿನ
ಗಡಚಿಕ್ಕುವ ಆ ಕೋಲ್ಮಿಂಚು

ತಿಳಿಮೋಡದಿ ಎಲ್ಲೆಡೆಯೂ
ತಂತುರು ಮಳೆ ಗಾನ,
ಬೂರಮೆಯ ರಮಿಸುತಿದೆ
ಜೋರ‍್ಮಳೆಯ ಯಾನ

ಹಸಿರಾಗಲು ಸಾಕಲ್ಲವೇ
ಬೂತಾಯಿಯ ಬಿರಿದ ಒಡಲು,
ತುಂಬುವುದು ಪಲವೆಲ್ಲಾ
ನಳನಳಿಸಿ ಬೂಮಕ್ಕಳ ಮಡಿಲು

ಸಮ್ರುದ್ದಿ ತಂದಿಹುದು ಈ
ಬೂರಮೆಗೆ ಮಳೆಗಾಲ,
ಎಲ್ಲರಿಗೂ ಬಂದಿಹುದು
ಸುಕತುಂಬಿದ ಒಳ್ಳೆಯ ಶುಬಕಾಲ

(ಚಿತ್ರಸೆಲೆ: pnnl.gov )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: