ಹನಿಗವನಗಳು

– ವೆಂಕಟೇಶ ಚಾಗಿ.

*** ನೆಮ್ಮದಿ ***

ಜೀವನದಲ್ಲಿ ಪ್ರತಿ ಕ್ಶಣ
ನೆಮ್ಮದಿಯಿಂದ ಇರಲು
ಬಿಡಬೇಕು ಚಿಂತೆ
ಕಶ್ಟ ಸುಕಗಳ
ಕೊಳ್ಳುವಿಕೆಯಲ್ಲೇ
ಮುಗಿಯುವುದು ಸಂತೆ

*** ಸಾಲ ***

ಅವ ಕೊಟ್ಟ ಸಾಲದಾಗ
ಅರಮನೆ ಕೊಂಡೆ
ಸಾಲ ತೀರಿಸಲಾಗದೇ
ಅವನಿಂದಲೇ
ಅವಮಾನ ಕಂಡೆ

*** ಏಜು ***

ಅವನಿಗೂ ಇವಳಿಗೂ
ಇನ್ನೂ
ಹೊಸ ಏಜು..
ಅದಕ್ಕೆಂದೇ ಹರಿದಾಡಿವೆ
ಆಗಾಗ ಮೆಸೇಜು..!!

*** ಹಡಗು ***

ಹಡಗು ಮುಳಗದಿದ್ದರೂ
ಹಡಗಿನಲ್ಲಿದ್ದವರು
ಎಲ್ಲರೂ ಸತ್ತಿದ್ದರು
ಕಾರಣ
ಕೆಟ್ಟು ಹೋದ ಹಡಗನ್ನು
ದೂಡಿ ಮುಂದೆ ಸಾಗಿಸಲು
ಎಲ್ಲರೂ ಇಳಿದಿದ್ದರು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks