ಕವಿತೆ: ಮೂಡಣದ ಸಿಂದೂರ
– ನಿತಿನ್ ಗೌಡ.
ಒಮ್ಮೆ ಇಣುಕಿ ನೋಡು ನೀ,
ಮಲೆಮಾರುತಗಳ ನೋಟವ ಸೀಳಿ;
ಮೂಡಣದ ಸಿಂದೂರವೇ
ಆಗಿರುವೆ ನೀ…
ದ್ರುಶ್ಟಿ ಬೊಟ್ಟು ಇನ್ನೇಕೆ?
ಕೆಂದಾವರೆಯಂತಹ ನಿನ್ನ ಕೆನ್ನೆಗೆ!
ನಿನ್ನ ಮುಂಗುರುಳೇ,
ಸುರಿವ ಸೋನೆ ಮಳೆಯು!
ಮಲೆನಾಡ ಹಸಿರ ಉಟ್ಟವಳೇ;
ಪಡುವಣಕೆ ನೀ ಒಡತಿ,
ಎಲ್ಲೆಯಿಲ್ಲದ ನಿನ್ನ ಸೊಬಗಿಗೆ,
ಒಲವನೆರಕವಲ್ಲದೆ ಇನ್ನೇನು ನೀಡಬಲ್ಲೆವು?
ತಣಿಸು ನೀ ರಸಿಕರ ಮನವ..
ತಪ್ಪಿಲ್ಲದೆ ಬೀಳುವೆವು ಪ್ರತಿನಿತ್ಯ,
ನಿನ್ನೊಲವ ಪಂಜರದಲಿ ಬಂದಿಯಾಗಿ ಕೊನೆತನಕ!
( ಚಿತ್ರಸೆಲೆ: bing.com )
ಇತ್ತೀಚಿನ ಅನಿಸಿಕೆಗಳು