ಕವಿತೆ: ನೆಮ್ಮದಿ

– ಕಿಶೋರ್ ಕುಮಾರ್.

ಕತ್ತಲೆಯು ಸರಿದು
ಬೆಳಕು ಹರಿದಿದೆ
ಮುನಿಸ ಬದಿಗೊತ್ತಿ
ಮನವ ಹಗುರಗೊಳಿಸುವ

ಅಲ್ಲೆಲ್ಲೋ ನೆಮ್ಮದಿ ಹುಡುಕದೆ
ನಮ್ಮ ಸುತ್ತಲೆ ನಗುವ ಹರಡಿ
ನೆಮ್ಮದಿ ಕಂಡು ಕೊಳ್ಳುವ
ಇತರರಿಗೂ ಹಂಚುವ

ಉಳಿದವರ ಗೆಲುವ ನೋಡಿ
ನಗುನಗುತ ಬೆನ್ನು ತಟ್ಟುವ
ಅವರ ಗೆಲುವಿನ ಗುಟ್ಟ ಅರಿತು
ನಾವೂ ಗೆಲುವಿಗಾಗಿ ಮುನ್ನುಗ್ಗುವ

ಕಲಿಕೆಗೆ ಮೇಲು ಕೀಳಿಲ್ಲ
ಎಲ್ಲರಿಂದಲೂ ಕಲಿಯುವ
ಸರಿ ತಪ್ಪುಗಳ ಗುರುತಿಸಿ
ಒಳ್ಳೆಯ ದಾರಿಯಲ್ಲಿ ನಡೆಯುವ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: