ಕವಿತೆ: ಒಲವಿನ ನುಡಿಮುತ್ತು

– ಕಿಶೋರ್ ಕುಮಾರ್.

ಒಲವು, ಪ್ರೀತಿ, Love

ಹೂವ ಹಿಡಿದು ನಿಲ್ಲುವುದಲ್ಲ
ಉಡುಗೊರೆ ನೀಡಿ ಗೆಲ್ಲುವುದಲ್ಲ
ಪ್ರೀತಿ ಇದು ಹುಡುಗಾಟವೂ ಅಲ್ಲ

ತುಡಿತದಿಂದ ಮೊದಲಾಗಿ
ಗೆಲುವವರೆಗೂ ಹೋರಾಡಿ
ಕೊನೆವರೆಗೂ ಬಾಳಿ ಜೊತೆಗೂಡಿ

ನಮ್ಮೊಬ್ಬರ ನಿಲುವಲ್ಲ ಇದು
ಇಬ್ಬರ ನಿಲುವಿನ ಗೆಲುವಿದು
ಎಚ್ಚರವಿರಲಿ ಇಬ್ಬರ ಬದುಕಿದು

ಹೊಸತರಲ್ಲಿದ್ದ ಹುಮ್ಮಸ್ಸು
ಬಾಡದಿರಲಿ ಯಾವತ್ತೂ
ಇದೇ ಒಲವಿನ ನುಡಿಮುತ್ತು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications