ದಕ್ಶಿಣ ಕಾಶಿ ಶಿವಗಂಗೆ (ಕಂತು – 4)
ಶಿವಗಂಗೆಯು ಗಂಗರು, ಚೋಳರು, ಹೊಯ್ಸಳರ, ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರು ಇವರೆಲ್ಲರ ಬಳಿಕ ಬೆಂಗಳೂರು ನಿರ‍್ಮಾತ್ರು ಕೆಂಪೇಗೌಡರ ಸುಪರ‍್ದಿಗೆ ಒಳಪಟ್ಟಿತ್ತು. ಶಿವಗಂಗೆಗಾಗಿ ಕೆಂಪೇಗೌಡರ ಕೊಡುಗೆ ಅದ್ವಿತೀಯ ಎಂಬುದಾಗಿ ಇಲ್ಲಿಯ ಇತಿಹಾಸ ಹೇಳುತ್ತದೆ. ಕೆಂಪೇಗೌಡರು ಕೆಂಪಾಪುರದಲ್ಲಿ ಕೊನೆಯುಸಿರೆಳೆದರಾದರೂ ತಮ್ಮ ಕೊನೆಯ ದಿನಗಳನ್ನು ಶಿವಗಂಗೆಯಲ್ಲಿ ಕಳೆದಿರಬಹುದು ಎಂದು ಇತಿಹಾಸ ತಜ್ನರು ಅಬಿಪ್ರಾಯ ಪಟ್ಟಿದ್ದಾರೆ.
ಹೆಚ್ಚು ಪುಣ್ಯ ಲಬಿಸುವ ಕ್ಶೇತ್ರ ಎಂದರೆ ಅದು ಶಿವಗಂಗೆ ಎನ್ನುವ ಅಬಿಪ್ರಾಯ ಇಲ್ಲಿನ ಸ್ತಳೀಯರದ್ದು. ಶಿವಗಂಗೆಯನ್ನು ಏರುತ್ತಾ ಹೋದಂತೆ ಅಲ್ಲಲ್ಲಿ ಮಂಟಪಗಳು,ನಂದಿ ವಿಗ್ರಹಗಳು, ರುಶಿ ಮುನಿಗಳು ತಪಸ್ಸು ಮಾಡುತ್ತಿದ್ದರೆನ್ನಲಾದ ಗುಹೆಗಳು ಎದುರಾಗುತ್ತವೆ. ಬೆಟ್ಟವಾದ್ದರಿಂದ ಮಂಗಗಳು ಇಲ್ಲಿ ಪ್ರವಾಸಿಗರಿಗೆ ಕಂಡುಬರುತ್ತವೆ).
ಬೆಟ್ಟದ ತುತ್ತ ತುದಿಯಲ್ಲಿ ಪ್ರತಿ ವರ‍್ಶ ಕಾರ‍್ತಿಕ ಮಾಸದಲ್ಲಿ ಸರ‍್ಕಾರಿ ಸ್ವಾಮ್ಯದ ಮುಜರಾಯಿ ಇಲಾಕೆ ಹಾಗು ಶಿವಗಂಗೆ ಮತ್ತು ಸುತ್ತ ಮುತ್ತಲಿನ ಗ್ರಾಮದ ಗ್ರಾಮಸ್ತರ ಸಹಕಾರದಿಂದ ಬೆಟ್ಟದ ತುತ್ತ ತುದಿಯಲ್ಲಿರುವ ದೀಪಸ್ತಂಬದ ಮೇಲೆ ದೀಪವನ್ನು ಹಚ್ಚಿ ಬೆಳಗುವ ಪ್ರತೀತಿಯಿದೆ. ಮಕರಸಂಕ್ರಾಂತಿ ಮಾತ್ರವಲ್ಲದೇ ಪ್ರತೀ ವರ‍್ಶ ಶಿವರಾತ್ರಿ ಹಬ್ಬದಂದು ಸಹ ಶಿವರೂಪಿ ಗಂಗಾದರೇಶ್ವರನಿಗೆ ಹಲವು ಅಬಿಶೇಕ, ಅಲಂಕಾರ, ನೈವೇದ್ಯ ಹಲವು ಬಕ್ತಿ ಸಮರ‍್ಪಣ ಆಚರಣೆಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ವಾರ ಪೂರ‍್ತಿ ದುಡಿದು ಮರಗಟ್ಟಿದ ಮನಸಿಗೆ ಮುದ ನೀಡುವ ಶಿವಗಂಗೆ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದ ಸ್ತಳ. ಈ ಎಲ್ಲಾ ಕಾರಣಗಳಿಂದಾಗಿ ಶಿವಗಂಗೆಯು ದಕ್ಶಿಣ ಕಾಶಿ ಎಂದೇ ಪ್ರಸಿದ್ದಿಯಾಗಿದೆ.
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು