ಕಲಿಕೆಯೇರ‍್ಪಾಡು ಎಲ್ಲೂ ಇಶ್ಟು ಕೆಟ್ಟಿಲ್ಲ: ಟಾಕೂರ

rabindranath-tagore-630-bio

ಇಂಡಿಯಾದ ಕಲಿಕೆಯೇರ‍್ಪಾಡಿನ ಬಗ್ಗೆ ರಬೀಂದ್ರನಾತ ಟಾಕೂರ ಅನಿಸಿಕೆ ಏನಿತ್ತೆಂದು ಅವರ ಈ ಕೆಳಗಿನ ಮಾತು ತಿಳಿಸುತ್ತದೆ:

ಪ್ರತಿ ನಾಡಿನಲ್ಲೂ ಕಲಿಕೆಯು ಆ ನಾಡಿನ ಜನರ ಬದುಕಿನ ಜೊತೆ ಹೊಂದುಕೊಂಡಿರುತ್ತದೆ. ನಮ್ಮ ಇಂದಿನ ಕಲಿಕೆಯೇರ‍್ಪಾಡು ಒಬ್ಬ ಮನುಶ್ಯನನ್ನು ಗುಮಾಸ್ತ, ವಕೀಲ, ಡಾಕ್ಟರ್, ಪೋಲಿಸ್ ಆಗಿ ಮಾರ‍್ಪುಗೊಳಿಸುವಲ್ಲಿ ಮುಂದಿದೆಯೇ ಹೊರತು, ಕಲಿಕೆಯು ಇನ್ನೂ ಕೂಡ ಒಬ್ಬ ರಯ್ತ, ಕುಂಬಾರ ಅತವ ಎಣ್ಣೆ ರುಬ್ಬುಗನನ್ನು ತಲುಪಿಲ್ಲ. ಬೇರೆ ಯಾವುದೇ ನಾಡಿನ ಕಲಿಕೆಯೇರ‍್ಪಾಡೂ ಇಂತಹ ಗಂಡಾಂತರದ ಸ್ತಿತಿಯಲ್ಲಿ ನಿಂತಿಲ್ಲ.

ಜೊತೆಗೆ, ಕಲಿಕೆ ಬಗ್ಗೆ ಅವರ ಈ ಕೆಳಗಿನ ನಿಲುವುಗಳು ಇವತ್ತಿಗೂ ಒಪ್ಪುತ್ತವೆ:

  1. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ತಾಯ್ನುಡಿಯಲ್ಲೇ ಕಲಿಕೆ ನಡೆಯಬೇಕು.
  2. ತನ್ನ ಸುತ್ತ ಮುತ್ತಲಿನ ಪರಿಸರಕ್ಕೆ ಹೊಂದಿಸಿ ಪರಿಸರದ ನುಡಿಯಲ್ಲೇ ಕಲಿಯುವುದು ಮಕ್ಕಳ ಬವ್ದಿಕ ಏಳಿಗೆಗೆ ಪೂರಕ.
  3. ಗಣ್ಯರಿಗೆ ಮತ್ತು ಪಟ್ಟಣಗಳ ಮಂದಿಗೆ ಎಂದೇ ಇಂಗ್ಲೀಶಿನಲ್ಲಿ ಕಲಿಸುವ ಕಲಿಕೆಯೇರ‍್ಪಾಡು ಇದ್ದರೆ, ಇದರಿಂದ  ಹಳ್ಳಿಗಳ ಬಡ ಜನರ ಮತ್ತು ಪಟ್ಟಣದ ಮಂದಿಯ ನಡುವೆ ಒಂದು ದೊಡ್ಡ ಕಂದರವೇ ಏರ‍್ಪಡುತ್ತದೆ.
  4. ಕಲಿಕೆಯಿಂದ ಮಾತ್ರ ಜನರು ತಮ್ಮ ಕಾಲುಗಳ ಮೇಲೆ ತಾವು ನಿಲ್ಲುವಂತವರಾಗಬಲ್ಲರು.

ಕಲಿಕೆ ಬಗ್ಗೆ ಟಾಕೂರರ ಕೆಲವು ತೊಡಗಿಕೆಗಳು (initiatives) ಇಂತಿವೆ:

  1. ಟಾಕೂರರು ಬಂಗಾಳಿ ಬಾಶೆಯಲ್ಲಿ ಬರೆಯುವ ಮೂಲಕ ಅದನ್ನು ಗಟ್ಟಿಗೊಳಿಸಿದರು, ಮತ್ತು ಶಾಲೆಗಳಲ್ಲಿ ಕಲಿಕೆಯು ಬಂಗಾಳಿ ನುಡಿಯಲ್ಲೇ ಆಗೆಬೇಕೆಂದು ಬೆಂಬಲ ನೀಡಿದರು.
  2. ಅವರು ಸೆಲಿಯಾದ (ತನ್ನದೇ ಎಸ್ಟೇಟ್)ನಲ್ಲಿ ಒಂದು ಮಾದರಿ ಶಾಲೆಯನ್ನು ಶುರು ಮಾಡಿ ತಮ್ಮ ಮಕ್ಕಳನ್ನೂ ಅಲ್ಲಿಗೆ ಕಳಿಸಿದರು. ಆ ಶಾಲೆಯಲ್ಲಿ ಬಂಗಾಳಿ ನುಡಿಯಲ್ಲಿ ಕಲಿಸಲಾಗುತ್ತಿತ್ತು.
  3. ಅವರು ಮೊದಲಿನಿಂದಲೂ ಬಾರತದ ಎಕನಾಮಿಕ್ಸ್, ಕ್ರುಶಿ, ಆರೋಗ್ಯದ ಆರಯ್ಕೆ ಮತ್ತು ಸುತ್ತ ಮುತ್ತಲಿನ ಹಳ್ಳಿಗಳಿಂದ ಸಿಗುವ ದಿನದಿನದ ವಿಗ್ನಾನವನ್ನು ಕಲಿಸಿಕೊಡುವಂತಹ ಒಂದು  ವಿಶ್ವವಿದ್ಯಾಲಯದ ಕನಸು ಕಂಡವರು. ಇಂತಹ ಒಂದು ವಿಶ್ವವಿದ್ಯಾಲಯ ಮಾತ್ರ ಸಮುದಾಯದ ಏಳಿಗೆಯ ಕೇಂದ್ರವಾಗಬಹುದು ಎಂದು ಹೇಳಿ “ವಿಶ್ವಬಾರತಿ” ವಿಶ್ವವಿದ್ಯಾಲಯ ಶುರು ಮಾಡಿದರು.

ಟಾಕೂರರು ಕಲಿಕೆ ಮತ್ತು ಕಲಿಕೆಯೇರ‍್ಪಾಡಿನ ಬಗ್ಗೆ ಕಂಡ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ ಎನ್ನಬಹುದು. ತಾಯ್ನುಡಿಯಲ್ಲಿ ಎಲ್ಲಾ ಹಂತದ ಕಲಿಕೆ ನಡೆಸಬಲ್ಲಂತಹ ಏರ್‍ಪಾಡು ಕಟ್ಟುವ ವರೆಗೆ ಹೆಚ್ಚೆಣಿಕೆಯಲ್ಲಿ ಈ ನೆಲದ ಜನರು ಕಲಿಕೆಯೇರ‍್ಪಾಡಿನಿಂದ ಹೊರಗೇ ಉಳಿಯುತ್ತಾರೆ.

ಮಾಹಿತಿ ಸೆಲೆ: ಪದ್ಮ ರಾಮಚಂದ್ರನ್ ಮತ್ತು ವಸಂತ ರಾಮ್ ಕುಮಾರ್“ಎಜುಕೇಶನ್ ಇನ್ ಇಂಡಿಯಾ” (ಇಂ).

ಬಾಬು ಅಜಯ್

(ಚಿತ್ರ: ibnlive.in.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: