ಹಿಂದಿಯಾದರೇನು ಸಿವಾ? ಹೀಬ್ರುವಾದರೇನು ಸಿವಾ?

– ರತೀಶ ರತ್ನಾಕರ

UPA hindi bayalarike

ದಿನಾಂಕ 6 ಜೂನ್ 2013ರ ಪ್ರಜಾವಾಣಿ ಸುದ್ದಿಹಾಳೆಯ ಮೊದಲ ಪುಟದಲ್ಲಿ ಬಾರತ ಸರ್‍ಕಾರದ ವಾರ್‍ತಾ ಮತ್ತು ಪ್ರಚಾರ ಸಚಿವಾಲಯ ನೀಡಿರುವ ಒಂದು ಬಯಲರಿಕೆ (advertisement) ಬೆರಗು ಮೂಡಿಸುತ್ತದೆ. ಯಾವುದೋ ಸುದ್ದಿಯನ್ನು ಹಿಂದಿಯಲ್ಲಿ ನೀಡಿ ಕೆಳಗಡೆ ಚಿಕ್ಕದಾಗಿ ಕನ್ನಡದಲ್ಲಿ ‘ಯುಪಿಎ- ಜನರನ್ನು ತಲುಪುವ ಮತ್ತು ಅವರ ಜೀವನ ಮಟ್ಟವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ 9 ವರ್‍ಶಗಳು’ ಎಂದು ಬರೆದಿದೆ. ಪ್ರಜಾವಾಣಿಯು ಒಂದು ಕನ್ನಡದ ಸುದ್ದಿಹಾಳೆ ಮತ್ತು ಇದರ ಓದುಗರು ಕನ್ನಡಿಗರೇ ಆಗಿರುತ್ತಾರೆ, ಹೀಗಿದ್ದಾಗಿ ಹಿಂದಿಯ ಬಯಲರಿಕೆ ಎಶ್ಟು ಮಂದಿಗೆ ಅರ‍್ತವಾದೀತು? ಇಂತಹ ಬಯಲರಿಕೆಗಳು ಹಿಂದಿಯಲ್ಲಿದ್ದರೂ ಒಂದೇ ಅತವಾ ಹೀಬ್ರೂ ನುಡಿಯಲ್ಲಿದ್ದರೂ ಒಂದೇ, ಹೆಚ್ಚಿನ  ಕನ್ನಡಿಗರನ್ನು ತಲುಪುವುದಿಲ್ಲ.

ಕೇಂದ್ರ ಸರ್‍ಕಾರದ ವಾರ್‍ತಾ ಮತ್ತು ಪ್ರಚಾರ ಸಚಿವಾಲಯವು ರಾಜಬಾಶಾ ಆಯೋಗದ ಒತ್ತಡದ ದೆಸೆಯಿಂದ ತನ್ನ ಪ್ರಚಾರದಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಬಳಸುತ್ತಿದೆ ಎನಿಸುತ್ತಿದೆ. ರಾಜಬಾಶಾ ಆಯೋಗದ ಪ್ರಕಾರ ಕೇಂದ್ರದ ಒಂದೊಂದು ಸಚಿವಾಲಯವೂ ತನ್ನ ಕೆಲಸಗಳಲ್ಲಿ ಹಿಂದಿಯನ್ನು ಕೆಲವು ಬಾರಿ ಕಡ್ಡಾಯವಾಗಿ ಬಳಸಬೇಕಿದೆ. ವಾರ್‍ತಾ ಮತ್ತು ಪ್ರಚಾರ ಸಚಿವಾಲಯವು ರಾಜಬಾಶಾ ಆಯೋಗದ ಒತ್ತಡವನ್ನು ಮೀರಿ ಕನ್ನಡ ಸುದ್ದಿ ಹಾಳೆಗಳಲ್ಲಿ ಕನ್ನಡದಲ್ಲೇ ಬಯಲರಿಕೆ ನೀಡುವ ಸಾಮಾನ್ಯ ಅರಿವು (common sense) ಹೊಂದಿಲ್ಲವೇ?

ಒಟ್ಟಿನಲ್ಲಿ, ಕನ್ನಡ ಸುದ್ದಿಹಾಳೆಗಳಲ್ಲಿ ಹಿಂದಿಯ ಬಳಕೆ ಮಾಡುವುದು ಎಲ್ಲರ ತೆರಿಗೆ ಹಣವನ್ನು ಸುಮ್ಮನೆ ಪೋಲು ಮಾಡಿದಂತೆ. ಉಪಯೋಗ ಮಾತ್ರ ಸೊನ್ನೆ.

(ಚಿತ್ರ: ಪ್ರಜಾವಾಣಿ)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.