ಒಂಟಿತನ, Loneliness

ಈಗಲೂ ನನ್ನ ಜೊತೆ ಇದ್ದಾಳೆ..

– ಪುಟ್ಟರಾಜು.ಕೆ.ಎಸ್.

loneliness3

 

ಸದಾ ನಗುತಿರುವೆ ಎಂದು ಆಣೆ ಮಾಡಿದ್ದೆ ನಾ
ಅವಳೇ ನನ್ನ ಸಂಗಾತಿ ಎಂದು ನಗುತಿದ್ದೆ ನಾ
ಕಲ್ಪನೆಗು ನಿಲುಕದ ಹಾಗೆ ಕಾಣೆಯಾದಳು
ನನ್ನ ಕಣ್ಣಲ್ಲಿ ಅವಳ ಬಿಂಬವ ಬಿಟ್ಟು ದೂರವಾದಳು
ಈಗಲೂ ನನ್ನ ಜೊತೆ ಇದ್ದಾಳೆ
ಅದು ನೆನಪಿನಲ್ಲಿ ಮತ್ತೆ ನನ್ನ ನೋವಿನಲ್ಲಿ

ನಾವಿಟ್ಟ ಹೆಜ್ಜೆಗಳು ನೆನಪಾಗಿದೆ
ನಮ್ಮಿಬ್ಬರ ಒಡನಾಟ ಮರೆಯಾಗಿದೆ
ಸಾಲು ಸಾಲು ನೆನಪುಗಳು ಗುನುಗುತಿವೆ ಮನದಲ್ಲಿ
ಸಾವಲ್ಲು ನೋವಲ್ಲು ನೀನೆ ಎಂದ ಆ ದಿನಗಳ ಮಾತಲ್ಲಿ
ಈಗಲೂ ನನ್ನ ಜೊತೆ ಇದ್ದಾಳೆ
ಅದು ನೆನಪಿನಲ್ಲಿ ಮತ್ತೆ ನನ್ನ ನೋವಿನಲ್ಲಿ

ಮನವೆಂಬ ಮಂಟಪದಲ್ಲಿ ದೇವತೆಯು ಅವಳು
ಪಾದದ ಅಡಿಯಲ್ಲಿ ಬರಿ ಹೂವಾದರೂ ಸಾಕೆಂದು ಬಯಸಿತ್ತು ನನ್ನ ಒಡಲು
ಪ್ರೀತಿಯೆಂಬ ಪ್ರಾರ‍್ತನೆಯಲ್ಲಿ ಮುಳುಗಿದ್ದೆ
ವರ ಕೊಡದ ದೇವತೆಯಂತೆ ನೀ ಕಲ್ಲಾದೆ
ಈಗಲೂ ನನ್ನ ಜೊತೆ ಇದ್ದಾಳೆ
ಅದು ನೆನಪಿನಲ್ಲಿ ಮತ್ತೆ ನನ್ನ ನೋವಿನಲ್ಲಿ

(ಚಿತ್ರಸೆಲೆ:  strengthenyourrelationship.com )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: