ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ

– ಕಿರಣ್ ಮಲೆನಾಡು.

 

ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ (ಬನವಾಸಿ = ಕನ್ನಡ ದೇಶ) – ಪಂಪ

 

“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ

ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್”

–  ಕವಿರಾಜಮಾರ‍್ಗ  – ನ್ರುಪತುಂಗ ಮತ್ತು  ಶ್ರೀವಿಜಯ

 

“ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್” 

–  ಕವಿರಾಜಮಾರ‍್ಗ  – ನ್ರುಪತುಂಗ ಮತ್ತು  ಶ್ರೀವಿಜಯ

 

“ಕನ್ನಡದೊಳ್ಪಿನ ನುಡಿಯಂ!

ಮುನ್ನಿನದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!!

ರನ್ನದ ಕನ್ನಡಿಯಂ ನಲ!

ವಿನ್ನೋಡಿದವಂಗೆ ಕುಂದದೇನಾದಪುದೇ? ”

ಆಂಡಯ್ಯ

 

“ಹಚ್ಚೇವು ಕನ್ನಡದ ದೀಪ  ಕರುನಾಡ ದೀಪ ಸಿರಿನುಡಿಯ ದೀಪ  ಒಲವೆತ್ತಿ ತೋರುವ ದೀಪ

ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು

ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ”

ಡಾ ।। ಡಿ. ಎಸ್. ಕರ‍್ಕಿ

 

“ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ” – ಜಿ. ಪಿ. ರಾಜರತ್ನಂ

“ಕನ್ನಡ ಎನೆ ಕುಣಿದಾಡುವುದೆನ್ನೆದೆ  ಕನ್ನಡ ಎನೆ ಕಿವಿ ನಿಮಿರುವುದು” – ಕುವೆಂಪು

“ಬಾರಿಸು ಕನ್ನಡ ಡಿಂಡಿಮವ ಓ ಕರ‍್ನಾಟಕ ಹೃದಯ ಶಿವ” – ಕುವೆಂಪು

“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” – ಕುವೆಂಪು

“ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ” – ಕುವೆಂಪು

“ಕನ್ನಡಕ್ಕಾಗಿ ಕೈ ಎತ್ತು ಅದು ಕಲ್ಪವೃಕ್ಷವಾಗುತ್ತದೆ” – ಕುವೆಂಪು

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” – ಹುಯಿಲಗೋಳ ನಾರಾಯಣರಾಯ

“ಒಂದೇ ಒಂದೇ ಒಂದೇ ಕರ‍್ನಾಟಕ ಒಂದೇ ,ಹಿಂದೆ ಮುಂದೆ ಎಂದೇ ಕರ‍್ನಾಟಕ ಒಂದೇ” ದ. ರಾ. ಬೇಂದ್ರೆ

“ಕರ‍್ನಾಟಕದಿಂದ ಭಾರತ” ಆಲೂರು ವೆಂಕಟ ರಾಯರು

“ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಗೆ “ – ರಾಮಚಂದ್ರ ಹಣಮಂತ ದೇಶಪಾಂಡೆ

“ಕನ್ನಡವು ಲಿಪಿಗಳ ರಾಣಿ” – ಆಚಾರ‍್ಯ ವಿನೋಬಾ ಬಾವೆ

“ಕರ‍್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು.  ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದಾ ಮಾತು” – ಬಿ. ಆರ್. ಲಕ್ಶ್ಮಣರಾವ್

“ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ನನಗಿರುವುದು ಒಂದೇ ಕನ್ನಡ” – ಅ. ನ. ಕ್ರಿಶ್ಣರಾಯರು

“ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ” – ಕೆ. ಎಸ್. ನಿಸಾರ್ ಅಹಮದ್

“ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವು” – ಮಂಜೇಶ್ವರ ಗೋವಿಂದ ಪೈ

“ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ” – ಆರ್. ಏನ್. ಜಯಗೋಪಾಲ್

“ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ ಕನ್ನಡವೇ ಎನ್ನುಸಿರು ಹೆತ್ತೆನ್ನ ತಾಯಿ”  – ಬೆನಗಲ್ ರಾಮರಾವ್

“ಹೆಸರಾಯಿತು ಕರ‍್ನಾಟಕ, ಉಸಿರಾಗಲಿ ಕನ್ನಡ” – ಚೆನ್ನವೀರ ಕಣವಿ

“ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು” –  ಹಂಸಲೇಕ

“ಕರುನಾಡ ತಾಯಿ ಸದಾ ಚಿನ್ಮಯಿ”  – ಹಂಸಲೇಕ

“ಜೇನಿನ ಹೊಳೆಯೊ, ಹಾಲಿನ ಮಳೆಯೊ ಸುಧೆಯೋ ಕನ್ನಡ ಸವಿನುಡಿಯೊ” – ಚಿ. ಉದಯಶಂಕರ್

“ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ” – ಚಿ. ಉದಯಶಂಕರ್

“ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ” – ಚಿ. ಉದಯಶಂಕರ್

“ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ” – ದೊಡ್ಡರಂಗೇಗೌಡ

 

( ಚಿತ್ರ ಸೆಲೆ: alokmu.blogspot.in  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: