ಪ್ರಯತ್ನ ಹಾಗು ಪಲ

ಪ್ರಕಾಶ ಪರ‍್ವತೀಕರ

jeda

ಇದು ಡೆನ್ಮಾರ‍್ಕಿನ ರಾಜನ ಕತೆ. ಈ ರಾಜ ಯುದ್ದವೊಂದರಲ್ಲಿ ದಯನೀಯವಾಗಿ ಸೋಲನ್ನು ಕಂಡು ಪಲಾಯನ ಮಾಡಿ  ಒಂದು ಹಾಳು ಬಿದ್ದ ಮನೆಯಲ್ಲಿ ಆತ ಅಡಗಿದ್ದ. ನಿರಾಶೆಯಿಂದ ಜಗತ್ತೇ ಶೂನ್ಯವಾದಂತೆ ಆತನಿಗೆ ಎನಿಸಿತ್ತು. ತನ್ನ ಹಣೆಬರಹವನ್ನು ಹಳಿಯುತ್ತ ಕುಳಿತಿದ್ದ. ಆತನಿಂದ ಸ್ವಲ್ಪ ದೂರದಲ್ಲಿ ಒಂದು ಮರವಿತ್ತು. ಅದನ್ನೇ ನೋಡುತ್ತ ಕುಳಿತ ರಾಜನಿಗೆ ಅದರಲ್ಲಿ ಚಲನವಲನ ಕಾಣಿಸಿದಾಗ, ಕುತೂಹಲದಿಂದ  ಮೇಲೆದ್ದು ಅದರ ಹತ್ತಿರ ಬಂದು ನೋಡಿದಾಗ ಜೇಡರ ಹುಳವೊಂದು ಗೋಚರವಾಯಿತು. ಮರದ ಟೊಂಗೆಗೆ ತನ್ನ ಉಗುಳು ದ್ರವಿಸಿ ಬಲೆ ನೇಯುವ ಕಾರ‍್ಯದಲ್ಲಿ ಮಗ್ನವಾಗಿತ್ತು.

ಮೇಲೆ ಹತ್ತುವ ಅದರ ಪ್ರಯತ್ನಗಳು ಯಶಸ್ವಿಯಾಗುತ್ತಿರಲಿಲ್ಲ. ಒಮ್ಮೊಮ್ಮೆ ಬಲವಾದ ಗಾಳಿ ಬೀಸಿ ಅದರ ದಾರ ಹರಿಯುತ್ತಿತ್ತು. ಮತ್ತೊಮ್ಮೆ ತಾನೇ ಬೀಳುತ್ತಿತ್ತು. ಮೇಲಿನಿಂದ ಕೆಳಗೆ ಬಿದ್ದ  ಜೇಡ, ಬೇಸರ ಪಡದೇ ತನ್ನ ಕೆಲಸವನ್ನು ಮತ್ತೆ ಶುರು ಮಾಡುತ್ತಿತ್ತು. ಡೆನ್ಮಾರ‍್ಕದ ರಾಜನಿಗೆ ಜೇಡರ ಹುಳದ ಸಾಹಸ ನೋಡಿ ನಗು ಬಂದಿತು. ತನ್ನ ಜೀವವನ್ನು ಮೇಲಿಂದ ಮೇಲೆ ಸಂಕಟದಲ್ಲಿ ಒಡ್ಡುವ ಅದರ ಹುಚ್ಚಾಟವು ಮೂರ‍್ಕತನದ್ದು ಎಂದು ಅನಿಸಿತು. ಆದರೆ ಅದು ಅದರ ಹತ್ತನೆಯ ಪ್ರಯತ್ನದಲ್ಲಿ ಅದು ಯಶಸ್ವಿಯಾಯಿತು. ತನ್ನ ಗಮ್ಯಸ್ತಾನಕ್ಕೆ ತಲುಪಿ ತನ್ನ ಮರಿಗಳನ್ನು ಕೂಡಿತು. ಈಗ ಅದರ ಮರಿಗಳ ಮುಕದಲ್ಲಿ ಮಂದಹಾಸ ಮೂಡಿತು. ರಾಜ ಇದನ್ನೆಲ್ಲ ನೋಡುತ್ತಲಿದ್ದ.

ಜೇಡು ಹುಳುವಿನ ಜಿದ್ದು ಹಾಗೂ ಚಲ ಆತನಿಗೆ ಪ್ರೇರಣೆ ಹಾಗು ಸ್ಪೂರ‍್ತಿ ನೀಡಿತು. ಮರಳಿ ಯತ್ನವ ಮಾಡು ಪಲವುಂಟು ಎಂಬ ನಾಣ್ಣುಡಿ ನೆನಪಿಗೆ ಬಂದಿತು. ರಾಜ ಟೊಂಕದಲ್ಲಿ ಕಟ್ಟಿಕೊಂಡ ಕಡ್ಗವನ್ನು ಹೊರಗೆ ತೆಗೆದು ಅದಕ್ಕೆ ನಮಸ್ಕರಿಸಿದ. ಈರ‍್ಶೆಯಿಂದ ಅವನ ಮನ ದಗದಗಿಸುತ್ತಿತ್ತು. ಕೇಕೆ ಹಾಕುತ್ತ ಹೊರಗೆ ಬಂದ. ಚದುರಿ ಹೋಗಿದ್ದ ತನ್ನ ಸೈನಿಕರನ್ನು ಮತ್ತೆ ಕಲೆ ಹಾಕಿದ. ಶೂರತನದಿಂದ ಹೋರಾಟ ಮಾಡಿ ಶತ್ರುಗಳ ಸಂಹಾರ ಮಾಡಿ ಮರಳಿ ರಾಜ್ಯ ಪಡೆದ. ವೈಪಲ್ಯಗಳು ಯಶಸ್ಸಿನ ಮೆಟ್ಟಲುಗಳು ಎಂಬುದನ್ನು ಮರೆಯಬಾರದು.

( ಬರಹಗಾರರ ಮಾತು : ಯಾರದೋ ಬಾಶಣದಲ್ಲಿ ಕೇಳಿದ ಕತೆ ) 

( ಚಿತ್ರಸೆಲೆ:  poietes.wordpress.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: