ಸರಳ ಜೀವಿ

– ಚಂದ್ರಗೌಡ ಕುಲಕರ‍್ಣಿ.

gandhi_spinning

ದೊಡ್ಡ ಕಿವಿಯ ಬೋಳು ತಲೆಯ
ಗಾಂದಿಗೊಂದು ನಮನ |
ದುಂಡು ಗಾಜು ಕನ್ನಡಕದ
ತಾತಗೊಂದು ಕವನ |

ಬಡಕು ದೇಹ ತುಂಡು ಬಟ್ಟೆ
ಆತ್ಮ ಬಲವು ಅಸಮ |
ಸ್ವಂತ ಶಕ್ತಿ ಗಳಿಸೆ ತಾನು
ಜಪಿಸಿ ರಾಮ ನಾಮ |

ಹಿಂಸೆ ತೊರೆದು ಸತ್ಯ ಮೆರೆದ
ತ್ಯಾಗ ಜೀವಿ ಗಾಂದಿ |
ಹೊರಟು ಬಂದ್ರು ದಂಡಿ ಯಾತ್ರೆ
ಲಕ್ಶ ಲಕ್ಶ ಮಂದಿ |

ತಕಲಿ ಹಿಡಿದು ನೂಲು ತೆಗೆದು
ಕೊಟ್ಟ ಕಾದಿ ದೀಕ್ಶೆ |
ಸ್ವಾವಲಂಬಿ ಯಾಗೆ ಬೇಡ
ಅನ್ಯ ದೇಶ ಬಿಕ್ಶೆ |

ಬರೀ ಮೈಯ ಪಕೀರಂದು
ಎಂತ ದಿಟ್ಟ ನಿಲುವು |
ಪಾರತಂತ್ರ್ಯ ದಿಂದ ಮುಕ್ತಿ
ತಂದು ಕೊಡ್ತು ಗೆಲುವು |

ಇಂತ ಒಬ್ಬ ಸರಳ ವ್ಯಕ್ತಿ
ಇದ್ದನೆಂದ್ರೆ ಹಿಂದೆ |
ದೇಶ ಬಂದು ವಿಶ್ವ ಜನತೆ
ನಂಬಲಾರ‍್ರು ಮುಂದೆ |

(ಚಿತ್ರ ಸೆಲೆ: wikipedia.org)Categories: ನಲ್ಬರಹ

ಟ್ಯಾಗ್ ಗಳು:, , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s