ಕರೆದಂತೆ ಆಯಿತು ನನ್ನ..
– ಸುರಬಿ ಲತಾ.
ಕರೆದಂತೆ ಆಯಿತು ನನ್ನ
ಹೊರ ಬಂದು ನೋಡಲು
ಕಂಡೆ ಅದೇ ನೆರಳನ್ನ
ಬೀಸುವ ಗಾಳಿಯಲಿ ತೇಲಿ ಬಂತು
ಅವನ ನಗುವಿನ ಅಲೆ
ಅದಾಗಿತ್ತು ಸೆಳೆಯುವ ಬಲೆ
ಸಣ್ಣ ಕೂಗಿಗೆ ಎಚ್ಚೆತ್ತ ಮನವು
ಹುಡುಕಲು ನಾನು ಸುತ್ತಲೂ
ಬಾಹುಗಳಲಿ ಬಂದಿಯಾಗಿತ್ತು ನಡುವು
ಬೆರೆಯಲು ನಾಲ್ಕು ನಯನಗಳು
ಬರೆದೆ ಸಾಲು ಸಾಲು ಕವನಗಳು
ಕಂಡೆ ಎರಡು ಒಡಲು ಬೆರೆತಂತೆ ನೆರಳು
(ಚಿತ್ರಸೆಲೆ: wallpapers-kids.com)


ಇತ್ತೀಚಿನ ಅನಿಸಿಕೆಗಳು