ಅದುವೇ ಆತ್ಮ ಬಂದನ

– ಎಡೆಯೂರು ಪಲ್ಲವಿ.

sm-05

 

ಸದಾ ಬರಲು ಹಟ ಹಿಡಿಯುವ ಕಣ್ಣ
ಹನಿಗಳು ನಿನ್ನ ನೆನೆದಾಗ
ಸರಾಗವಾಗಿ ಸ್ರವಿಸುವ
ವೈಬೋಗವೇನು, ಕಣ್ಣೋಟದ
ಬೇಟಿ ಅದುವೇ ಆತ್ಮ ಬಂದನ.
ಹೀಗೇಕೆ ಮೌನದಿ ದೂರ ಸರಿದೆ?

ಜೀವ ಜೀವದ ಕೇಂದ್ರ ಕಣವು
ನೀನಾಗಿರುವಾಗ ಬೇರೇನನ್ನೂ ನೆನೆಯದಾದೆ
ಒಲವಿನ ಬಾವ ಸುದೆಯನ್ನು ಹರಿಸುವ
ಮೋಹ ನಿನ್ನಲ್ಲಿ ತಳೆದಿರಲು
ಹ್ರುದಯದರಮನೆಗೆ
ರಾಜಕುಮಾರ ನೀನೆಂದಿಗೂ

ನಿನ್ನ ಹ್ರುದಯ ಮಂದಿರದಲ್ಲಿ
ಕುಳಿತು ಗರ‍್ಬ ದರಿಸಿ
ನಿನ್ನೆದೆಯ ಅಮೂರ‍್ತ ರೂಪಕ್ಕೆ ಹೊಸ
ಜೀವಚೇತನದ ಸೆಲೆ ಸ್ರುಜಿಸಿ
ಬುವಿಗೆ ನಾ ಸ್ವಾಗತಿಸಲೇ ಒಮ್ಮೆ

ಬೇಡವೆಂದರೂ ಹಂಬಲಿಕೆಯ
ಆಲಿಂಗನದ ಪರಿಬಾವವೇನಿದು
ಹ್ರುದಯ ಜ್ಯೋತಿಯಲ್ಲಿ ನಿನ್ನ ದ್ಯಾನದ
ಹಣತೆ ಆರದಿರಲಿ ಎಂದೆಂದಿಗೂ
ನನ್ನಾತ್ಮದ ಅನುಬೂತಿಯ ಸಾಕ್ಶಾತ್ಕಾರದಲ್ಲಿ
ನಿನ್ನೊಲವಿನ ಕಂಪು ಸದಾ ವಿಜ್ರುಂಬಿಸುತ್ತಿರಲಿ

(ಚಿತ್ರ ಸೆಲೆ: wenshow.co)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Thumba Chenagide. Heege munduvarisi.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *