ನವಿಲಿನ ಅಂದ

– ಚಂದ್ರಗೌಡ ಕುಲಕರ‍್ಣಿ.

navilu1

ನವಿಲೆ ನಿನ್ನ ಅಂದದ ಬಗೆಗೆ
ಎರಡೆ ಎರಡು ಮಾತು
ಒಳಗುಟ್ಟನ್ನು ಹೇಳಲೆ ಬೇಕು
ಮನಸು ಹೋಗಿದೆ ಸೋತು

ಯಾವ ಸೋಪು ಶ್ಯಾಂಪು ಬಳಸಿ
ದಿನವೂ ಜಳಕ ಮಾಡ್ತಿ
ರೇಶ್ಮೆ ತುಪ್ಪಳ ಗರಿಗಳಿಗೆಲ್ಲ
ಯಾವ ಎಣ್ಣೆ ಹಚ್ತಿ

ಇಂತಾ ಚಂದದ ಅಂಗಿ ನೀನು
ಯಾವಲ್ಲಿಂದ ತಂದಿ
ರಂಗು ರಂಗಿನ ಬಣ್ಣ ನೋಡಿ
ಕೇಳುವರೆಲ್ಲ ಮಂದಿ

ಎಶ್ಟು ಸುಂದರ ನ್ರುತ್ಯ ಮಾಡ್ತಿ
ಯಾವ ಶಾಲೆ ನಿಂದು
ದೇವಲೋಕದಲಿದ್ರು ನಾನು
ಕಲಿಯ ಹೋಗುವೆನಿಂದು

ಬೆಡಗಿನ ದೇಹ ಪಡಿಬೇಕಾದ್ರೆ
ಮಾಡ್ಲಿ ಎಂತ ಊಟ
ಹಾಳು ಮೂಳು ತಿನ್ನೊದು ಬಿಟ್ಟು
ಹೊಂದಲು ನಿನ್ನ ಮಾಟ

( ಚಿತ್ರ ಸೆಲೆ: animal-dream.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *