ಹಳೆಯ ನೋವು ಅಡಗಿ ಹೊಸ ನಲಿವು ಮೂಡಲಿ!

– ಪ್ರತಿಬಾ ಶ್ರೀನಿವಾಸ್.

2017 Calender on the red cubesವರ‍್ಶ ಮುಗಿಯುತಿದೆ ಹರುಶವಿಲ್ಲದೇ
ಕಣ್ಣೀರು ಕಂಪಿಸುತ್ತಿದೆ ಕಾರಣವಿಲ್ಲದೇ

ಒಂದಿಶ್ಟು ಕನಸುಗಳ ಹೊತ್ತು ಈ
ವರ‍್ಶಕ್ಕೆ ಕಾಲಿಟ್ಟ ಬಳಗವಿದು
ಕನಸುಗಳು ಮರೀಚಿಕೆಯಂತೆ
ನಮ್ಮಿಂದ ದೂರ ಓಡಿತು

ಮಹಾನಗರಿಯ ಉರಿಬಿಸಿಲಲ್ಲಿ
ಕೆಲಸ ಹುಡುಕಿ ಹೊರಟವರೆಶ್ಟೊ
ಸಿಗದೇ ಹೋದ ಕೆಲಸಕ್ಕೆ ಕಣ್ಣೀರಿಟ್ಟರು
ಸಿಗಬಹುದೆಂಬ ನಿರೀಕ್ಶೆಯಲ್ಲಿ ಹೆಜ್ಜೆ ಇಟ್ಟರು

ಮನಸ್ಸಿಲ್ಲದ ಮನೆಯಲ್ಲಿ
ಒಂಟಿ ಜೀವನದ ವಾಸ
ವಾರದ ಕೊನೆಯಲ್ಲಿ ಸಿಗುವ
ಸ್ನೇಹಿತರ ಒಡನಾಟವೇ ಸಂತೋಶ

ದುಡಿದರೂ ಮುಗಿಯದ
ಕಶ್ಟಗಳ ಲೋಕ
ತೀರಿದರು ತೀರದ
ಆಮಿಶಗಳ ಮೋಹ

ಮೋಸದ ಬಲೆಗೆ ಬಿದ್ದು
ಪಾಟ ಕಲಿತು ಎದ್ದವರಶ್ಟು
ಮೋಸವೆಂದು ಅರಿಯದೇ
ಸಾವಿನಲ್ಲಿ ಹುದುಗಿದವರೊಂದಿಶ್ಟು

ನಡೆಯುವ ದಾರಿಯಲಿ ಎಡವದಿರಿ
ನಂಬುವ ಮೊದಲು ಅರಿವಿರಲಿ
ಕಶ್ಟಗಳೆಲ್ಲಾ ಹಳೆಯ ವರ‍್ಶಕ್ಕೆ ಮುಗಿಯಲಿ
ಸುಕದ ಹಾದಿ ಹೊಸ ವರ‍್ಶಕ್ಕೆ ತೆರೆಯಲಿ

( ಚಿತ್ರ ಸೆಲೆ: imiaweb.orgp )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: