ತಾನೋಡಗಳ ಜಗತ್ತಿನಲ್ಲಿ 2016

ಜಯತೀರ‍್ತ ನಾಡಗವ್ಡ.

free-valve

ಕೊನಿಸ್ಗೆಗ್‍ನವರ ಪ್ರೀವಾಲ್ವ್ 2016ರ ವರುಶದ ಅರಕೆಗಳಲ್ಲಿ ಒಂದು

ಹಳೆಯ ವರುಶ ಕಳೆದು ಹೊಸ ವರುಶಕ್ಕೆ ಕಾಲಿಟ್ಟಾಗಿದೆ. ಹೊಸ ವರುಶದಲ್ಲಿ ನಮ್ಮ ಬದುಕು ಹೇಗೆ ಬದಲಾಗಲಿದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ವರುಶ ಅಂದರೆ 2016ರಲ್ಲಿ ತಾನೋಡದ(Automobile) ಕೈಗಾರಿಕೆಯಲ್ಲಿ ಕಂಡು ಬಂದ ಕೆಲ ಅರಕೆಗಳು(Inventions) ನಮ್ಮ ಮುಂಬರುವ ದಿನಗಳಲ್ಲಿ ಹಲವಾರು ಬದಲಾವಣೆ ತರುವುದಂತೂ ದಿಟ. ಇಂತ ಕೆಲವು ಅರಕೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಕೊನಿಸ್ಗೆಗ್‍ನವರ ಪ್ರೀವಾಲ್ವ್ (Koenigsegg FreeValve):

ಹಲವಾರು ದಿನಗಳಿಂದ ಬಿಣಿಗೆಗಳು ಉಬ್ಬುಗುಣಿಗಳನ್ನು(Camshaft) ಬಳಸುತ್ತ ಬಂದಿವೆ. ಉಬ್ಬುಗುಣಿಗಳು ಬಿಣಿಗೆಯ ತೆರಪುಗಳ(Valves) ತೆರೆಯುವಿಕೆ ಮತ್ತು ಮುಚ್ಚುವಿಕೆಯನ್ನು ಹಿಡಿತದಲ್ಲಿಟ್ಟಿರುತ್ತವೆ. ತೆರಪುಗಳ ತೆರೆಯುವಿಕೆ ಮತ್ತು ಮುಚ್ಚುವಿಕೆಯಿಂದ ಸರಿಯಾದ ಹೊತ್ತಿಗೆ ಗಾಳಿ, ಉರುವಲು ಉರುಳೆಯ(Cylinder) ಒಳಹೋಗುವ ಹಾಗೂ ಉರಿಯುವಿಕೆಯಿಂದ ಉಂಟಾದ ಕೆಡುಗಾಳಿ/ಹೊಗೆ ಹೊರಹಾಕುವ ಕೆಲಸಗಳು ನಡೆಯುತ್ತಿರುತ್ತವೆ. ಈ ಉಬ್ಬುಗುಣಿಗಳನ್ನು ಸುದಾರಿಸಿ, ಅವುಗಳು ತೆರಪುಗಳ ಮೇಲೆ ಕಟ್ಟುನಿಟ್ಟಾದ ಹಿಡಿತ (Precise Control) ಹೊಂದಿದರೆ ಬಿಣಿಗೆಯ ಅಳವುತನ(Efficiency) ಹೆಚ್ಚಾಗುವುದು. ಎಶ್ಟೇ ಹಿಡಿತ ಸಾದಿಸಿದರೂ ಸವೆತ, ಕೊರೆತಗಳಿಂದ ಈ ಬಿಡಿಬಾಗಗಳ ಅಳವುತನ ಕೆಲ ಹೊತ್ತಿನವರೆಗೆ ಮಾತ್ರ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಸ್ವೀಡನ್ ಮೂಲದ ಪ್ರೀವಾಲ್ವ್ ಎಂಬ ಬಂಡಿ ಬಿಡಿಬಾಗಗಳ ಕೂಟ ಹೊಸದೊಂದು ಕ್ಯಾಮ್‌ಲೆಸ್(ಅಂದರೆ ಉಬ್ಬುಗುಣಿಗಳಿರದ) ಚಳಕವೊಂದನ್ನು ಕಂಡುಹಿಡಿದು, ಚೀನಾದ ಕೋರೊಸ್(Qoros) ಹೆಸರಿನ ಬಂಡಿ ತಯಾರಕ ಕೂಟದ ಬಿಣಿಗೆಗಳಲ್ಲಿ ಅಳವಡಿಸಿ ಗೆಲುವು ಕಂಡಿದೆ. ಕೋರೊಸ್‌ನ ಈ ಬಿಣಿಗೆಯಲ್ಲಿ ಉಬ್ಬುಗುಣಿ ಬದಲಾಗಿ ಮಿಂಚಿನ ಆಕ್ಚುಯೇಟರ‍್(Actuator) ಬಳಸಿ ತೆರಪುಗಳ ಮುಚ್ಚುವಿಕೆ, ತೆರೆಯುವಿಕೆ ಮೇಲೆ ಕರಾರುವಕ್ಕಾದ ಹಿಡಿತ ಸಾದಿಸಿ, ಬಿಣಿಗೆಯ ಅಳವುತನ ಹೆಚ್ಚಿಸಲಾಗಿದೆ. ಬಹುತೇಕ ಎಲ್ಲ ಬಂಡಿ ತಯಾರಕರು ಬಿಣಿಗೆ ಅಳವುತನ ಹೆಚ್ಚಿಸುವತ್ತ ಕೆಲಸ ಮಾಡುತ್ತಿರುವ ಇಂತ ಹೊತ್ತಿನಲ್ಲಿ, ಪ್ರೀವಾಲ್ವ್ ಕೂಟದವರ ಈ ಚಳಕದ ಗೆಲುವು ಕಂಡಿತವಾಗಿಯೂ ಸಿಹಿ ಸುದ್ದಿಯಾಗಿದೆ. ಮುಂಬರುವ ದಿನಗಳಲ್ಲಿ ನಾವೆಲ್ಲ ಓಡಾಡುವ ಬಂಡಿಗಳಲ್ಲಿ ಈ ಚಳಕವನ್ನು ಅಳವಡಿಸಿದರೂ ಅಚ್ಚರಿಪಡಬೇಕಿಲ್ಲ. ಪ್ರೀವಾಲ್ವ್ ಕೂಟ, ಸ್ವೀಡನ್ ಮೂಲದ ಸೂಪರ್ ಕಾರ್ ತಯಾರಕ ಕೊನಿಸ್ಗೆಗ್ ಕೂಟದ ಅಂಗ ಸಂಸ್ತೆಯಾಗಿದ್ದು ಸ್ವತಂತ್ರವಾಗೇ ಕೆಲಸಮಾಡುತ್ತಿದೆ. ಇದೇ ಕಾರಣಕ್ಕೆ ಈ ಚಳಕವನ್ನು ಹೆಚ್ಚಿನ ಮಂದಿ ಕೊನಿಸ್ಗೆಗ್‌ನವರ ಪ್ರೀವಾಲ್ವ್ ಎಂದು ಕರೆದಿದ್ದಾರೆ. ಪ್ರೀವಾಲ್ವ್ ಎಂದರೂ ಕೂಡ ತೆರಪುಗಳ ಬಿಡುವಾದ ಕದಲಿಕೆ (Free Movement) ಎಂಬರ‍್ತಗ ಬರುವುದರಿಂದ ಇದನ್ನು ಕೆಲವರು ಪ್ರೀವಾಲ್ವ್ ಚಳಕವೆಂದು ಕರೆಯುತ್ತಿದ್ದಾರೆ.

ಮೆಕ್ಲಾರೆನ್ ಕೂಟದ ಹೊಸ 570S ಕಾರು:

mclaren

ಮೆಕ್ಲಾರೆನ್ 570S

ಪಾರ‍್ಮುಲಾ-1 ಪಯ್ಪೋಟಿಗಳ (Formula-1 Racing) ಕಾರುಗಳಲ್ಲಿ ಬಹಳಶ್ಟು ಹೆಸರುವಾಸಿಯಾಗಿರುವ ಮೆಕ್ಲಾರೆನ್ ಕೂಟ, ಕಳೆದ ವರುಶ 570S ಎಂಬ ಹೊಸತಾದ ಕಾರೊಂದು ಹೊರತಂದಿದ್ದು ವಿಶೇಶ. ಈ ಕಾರು ಆಟೋಟದ ಪಯ್ಪೋಟಿಗಳಿಗೆ ಬದಲಾಗಿ ಹಿರಿಮೆಯ ಆಟೋಟದ ಬಂಡಿಯಾಗಿ(Luxury sports Car) ಹೊರಬಂದಿದೆ. ಹವ್ಯಾಸಿ ಓಡಿಸುಗರಲ್ಲದೇ, ಜನಸಾಮಾನ್ಯರು ಬಳಸಬಲ್ಲ ಈ ಕಾರು, ಸೊನ್ನೆ ವೇಗದಿಂದ 100 ಕಿ.ಮೀ/ಪ್ರತಿಗಂಟೆಯ ವೇಗಕ್ಕೇರಲು ಬರೀ ಮೂರೇ ಸೆಕೆಂಡು ತೆಗೆದುಕೊಳ್ಳುತ್ತದೆ. 562 ಕುದುರೆಬಲದ ಬಿಣಿಗೆ ಪಡೆದಿರುವ ಕಾರಿನ ಬೆಲೆ 1,80,000 ಡಾಲರ್ (ಸುಮಾರು 1.23ಕೋಟಿ ರೂಪಾಯಿಗಳು). ಪಾರ‍್ಮುರಲಾ-1 ಗಳಂತ ಪಯ್ಪೋಟಿಗೆ ಹತ್ತಾರು ಕೋಟಿ ಸುರಿದು ಬಂಡಿ ಅಣಿಗೊಳಿಸುವ ಮೆಕ್ಲಾರೆನ್‌ನ ಈ ಹೊಸ ಬಂಡಿ, ಸಿರಿಮೆಯ ಆಟೋಟದ ಕಾರಿನ ಒಲವುಳ್ಳವರಿಗೆ ಅಗ್ಗದ ಬೆಲೆಯ ಕಾಣಿಕೆಯಾಗಿದೆ.

ಶೆವರ‍್ಲೆಯ ಬೋಲ್ಟ್ ಇವಿ(Chevrolet Bolt EV):

bolt-ev

ಶೆವರ‍್ಲೆ ಬೋಲ್ಟ್ ಇವಿ

ಕೆಡುಗಾಳಿ ಕಡಿತಗೊಳಿಸಿ ವಾತಾವರಣ ಚೊಕ್ಕವಾಗಿಸಲು ಜಗತ್ತಿನ ಎಲ್ಲೆಡೆ ಮಿಂಚಿನ ಕಾರುಗಳ (Electric Cars) ಬೇಡಿಕೆ ಹೆಚ್ಚಿದೆ. ಕಾರ‍್ಬಿನ್ ಡೈಆಕ್ಸೈಡ್(CO2), ನೈಟ್ರೋಜನ್ ಆಕ್ಸೈಡ್(NO) ನಂತ ಕೆಟ್ಟ ಹೊಗೆ ಉಗುಳದೇ ಸಾಗುವ ಮಿಂಚಿನ ಕಾರುಗಳ ಪ್ರಮುಕ ಕೊರತೆಯೆಂದರೆ ಇವುಗಳು ಸಾಗುವ ದೂರ. ಒಂದೊಮ್ಮೆ ಮಿಂಚಿನ ಹುರುಪು (Charged) ತುಂಬಿಸಿದರೆ ಹೆಚ್ಚೆಂದರೆ 200 ಮಯ್ಲಿ(ಸುಮಾರು 320 ಕಿ.ಮೀ.) ಅಶ್ಟೇ ಸಾಗುವ ಮಿಂಚಿನ ಕಾರುಗಳು, ಇದರಿಂದ ಸಾಕಶ್ಟು ಹಿನ್ನಡೆ ಅನುಬವಿಸಿವೆ. ಮಿಂಚಿನ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಕೂಟದ ಕಾರುಗಳೂ ಇದಕ್ಕೆ ಹೊರತಾಗಿಲ್ಲ. ಆದರೆ 2016ರಲ್ಲಿ ಜನರಲ್ ಮೋಟಾರ‍್ಸ್, ಶೆವರ‍್ಲೆ ಬೋಲ್ಟ್ ಈವಿಯ ಹೊಸ ತಲೆಮಾರಿನ ಬಂಡಿಯನ್ನು ಅಣಿಗೊಳಿಸಿದ್ದು ಇದು 238 ಮಯ್ಲಿ ಅಂದರೆ 383 ಕಿ.ಮೀ.ಸಾಗಬಲ್ಲುದು. ಶೆವರ‍್ಲೆಟಯವರ ಈ ಹೊಸ ಬಂಡಿಯು ಮಿಂಚಿನ ಬಂಡಿ ಕೊಳ್ಳುಗರಲ್ಲಿ ಆಸಕ್ತಿ ಹೆಚ್ಚಿಸಿದೆ.

ತನ್ನಿಂದ ತಾನೇ ಜೋಡಣೆಯಾಗಬಲ್ಲ ಕೂರುಮಣೆ(Self Adjusting Seat):

adjustable-car-seat

ಚಿಕ್ಕಮಕ್ಕಳನ್ನು ಬಂಡಿಯಲ್ಲಿ ಕೂರಿಸಿಕೊಂಡು ಸಾಗಲು, ಜರ‍್ಮ)ನಿ, ಅಮೇರಿಕಾ ಸೇರಿದಂತೆ ಹಲವು ಮುಂದುವರಿದ ದೇಶಗಳಲ್ಲಿ ವಿಶೇಶ ಕಟ್ಟಳೆಯೊಂದಿದೆ. ಮಕ್ಕಳನ್ನು ಬಂಡಿಯಲ್ಲಿ ಕೂರಿಸಿಕೊಳ್ಳಲು ಬೇರೆಯಾದ ಕೂರುಮಣೆಯಿರಬೇಕು. ಬಂಡಿಗಳಲ್ಲಿ ಜೋಡಿಸಲ್ಪಟ್ಟಿರುವ ಸಾಮಾನ್ಯ ಕೂರುಮಣೆಗಳು ದೊಡ್ಡವರಿಗೆ ತಕ್ಕುದಾಗಿದ್ದು, ಚಿಕ್ಕಮಕ್ಕಳು ಕುಳಿತುಕೊಳ್ಳಲು ತಕ್ಕುದಾಗಿರುವುದಿಲ್ಲ ಮತ್ತು ಮಕ್ಕಳ ಕಾಪಿಗೆ(Safety) ಅಡ್ಡಿಯಾಗುವುದೆಂದು ಗಮನದಲ್ಲಿಟ್ಟು ಇಂತ ಕಟ್ಟಳೆ ತರಲಾಗಿದೆ. ಮಕ್ಕಳಿಗೆ ತಕ್ಕ ಬೇರೆ ತರಹದ ಕೂರುಮಣೆಯನ್ನು ಬಂಡಿಯ ಸಾಮಾನ್ಯ ಕೂರುಮಣೆಯ ಮೇಲೆ ಜೋಡಿಸಿ ಅವರನ್ನು ಕೊಂಡೊಯ್ಯಬಹುದು. ಮಕ್ಕಳ ಕೂರುಮಣೆಯನ್ನು ಬಂಡಿಯ ಸಾಮಾನ್ಯ ಕೂರುಮಣೆಗೆ ಹೊಂದಿಸಬೇಕಾದಾಗ ಮಂದಿ ಹೆಣಗಾಡುವುದು ಸಾಮಾನ್ಯ. ಹಲವಾರು ಬಾರಿ ಇದು ಕಿರಿಕಿರಿಯ ವಿಶಯವಶ್ಟೇ ಅಲ್ಲ, ಮಕ್ಕಳಿಗೂ ಅಪಾಯ. ಅಮೇರಿಕಾದ ಸಾರಿಗೆ ಇಲಾಕೆಯ ಮಾಹಿತಿಯಂತೆ 50% ಮಕ್ಕಳ ಕೂರುಮಣೆಗಳು ಸರಿಯಾಗಿ ಜೋಡಿಸಲ್ಪಟ್ಟಿರುವುದಿಲ್ಲವಂತೆ. ಈ ಬವಣೆಯನ್ನು ನೀಗಿಸಲು ಪಾರ್‍ಮಾಮ್ಸ್(4moms) ಎಂಬ ಅಮೇರಿಕಾ ಮೂಲದ ಕೂಟವೊಂದು ತನ್ನಿಂದ ತಾನೇ ಜೋಡಣೆಯಾಗಬಲ್ಲ ಕೂರುಮಣೆಯೊಂದನ್ನು ಹೊರತಂದಿದೆ. ಈ ಕೂರುಮಣೆ 20 ಅರಿವಿಕಗಳನ್ನು(Sensors), ಸುತ್ತಳಕಗಳನ್ನು(Gyroscope) ಹೊಂದಿದ್ದು, ಸುಳುವಾಗಿ ಜೋಡಣೆಯಾಗಿ ಮಕ್ಕಳನ್ನು ಕಾಪಾಡಿಕೊಂಡು ಹೋಗಲಿದೆಯಂತೆ. ಸುಮಾರು 500 ಡಾಲರ‍್‌ಗಳ ಬೆಲೆಯಲ್ಲಿ ಇದನ್ನು ಕರೀದಿ ಮಾಡಬಹುದು.

ಮಿಂಚಿನ ಓಡುಗೆಯಿಂದ ಕಸುವು ಪಡೆಯುವ ಗಾಳಿದೂಡುಕ:

audi-tsq7

ಆವ್ಡಿ ಎಸ್‌ಕ್ಯೂ7 ಟಿಡಿಆಯ್

 

ಬಂಡಿಗಳ ಬಿಣಿಗೆಗೆ ಅಳವಡಿಸಿರುವ ಗಾಳಿದೂಡುಕಗಳು(Turbocharger) ಬಂಡಿ ಶುರುವಾಗುತ್ತಿದ್ದಂತೆ ಕೆಲಸ ಮಾಡುವುದಿಲ್ಲ, ಇದಕ್ಕೆ ಕೆಲಹೊತ್ತು ತಗಲುತ್ತದೆ. ಬಿಣಿಗೆಯ ಸುತ್ತುವಿಕೆ(Engine revolutions) ಹೆಚ್ಚಿದಂತೆ ಗಾಳಿದೂಡುಕಗಳು ಕೆಲಸಮಾಡಲು ಶುರುವಾಗುತ್ತವೆ. ಬಿಣಿಗೆಯ ಸುತ್ತುವಿಕೆ ಕೆಳಮಟ್ಟದಲ್ಲಿದ್ದಾಗ ಗಾಳಿದೂಡುಕಗಳು ಕೆಲಸಮಾಡುವಂತೆ ಹೊಸ ಅರಕೆಗಳು ನಡೆಯುತ್ತಲೇ ಇದ್ದವು. ಇದಕ್ಕೆ ಸಂಬಂದಿಸಿದ ಹೊಸ ಅರಕೆಯೊಂದು ಗೆಲುವು ಕಂಡಿದೆ. ಮಿಂಚಿನ ಓಡುಗೆಯನ್ನು(Electric Motor) ಬಳಸಿ, ಅದರ ಕಸುವಿನ ಮೂಲಕ ಕಡಿಮೆ ಸುತ್ತುವಿಕೆಯಲ್ಲೂ ಗಾಳಿದೂಡುಕಗಳು ಕೆಲಸ ಮಾಡುವಂತ ಏರ‍್ಪಾಯಟು ಮಾಡಲಾಗಿದೆ. ಗಾಳಿದೂಡುಕದಲ್ಲಿರುವ ಒತ್ತುಕಕ್ಕೆ(Compressor) ಮಿಂಚಿನ ಓಡುಗೆಯನ್ನು ಜೋಡಿಸಿರಲಾಗಿರುತ್ತದೆ. 2017ರ ಹೊಸ ಆವ್ಡಿ ಎಸ್‌ಕ್ಯೂ7 ಟಿಡಿಆಯ್ (Audi SQ7 TDI) ಮಾದರಿ ಬಂಡಿಗಳಲ್ಲಿ ಇದನ್ನು ಅಳವಡಿಸಲಾಗಿದೆ. ಯುರೋಪ್ ನಾಡುಗಳಲ್ಲಿ ಮಾತ್ರ ಈ ಮಾದರಿಗಳು ಮಾರಾಟಕ್ಕೆ ಬಿಡಲಾಗಿದ್ದು, ಬರುವ ದಿನಗಳಲ್ಲಿ ಇತರೆ ಕಂಡಗಳಲ್ಲೂ(Continents) ಈ ಬಂಡಿಯನ್ನು ಬಿಡುಗಡೆ ಮಾಡುವರು.

3D-ಅಚ್ಚುಕದಿಂದ ಅಚ್ಚು ಹಾಕಲ್ಪಟ್ಟ ಇಗ್ಗಾಲಿ ಬಂಡಿ ಮಾದರಿ:

light-rider

ಲಾಯ್ಟ್‌ರೈಡರ‍್

3D-ಅಚ್ಚುಹಾಕುವಿಕೆ(3D-Printing) ಇತ್ತೀಚಿಗೆ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಹಲವು ಕಯ್ಗಾರಿಕೆಗಳಿಗೆ ಬೇಕಾಗುವ ಮಾದರಿ ತಯಾರಿಸಲು 3D-ಅಚ್ಚುಹಾಕುವಿಕೆ ನೆರವು ನೀಡಲಿದೆ. ಇಂದಿಗೂ ಹೆಚ್ಚಿನ ಕಯ್ಗಾರಿಕೆಗಳು, ಎಣ್ಣುಕಗಳಲ್ಲಿ(Computer) ತಾವು ಉಂಟುಮಾಡಬೇಕಿರುವ ವಸ್ತುವನ್ನು ಮೊದಲು ಈಡುಮಾಡಿ, ಒರೆಗೆ ಹಚ್ಚುವ ಮಾದರಿಯನ್ನು ತಯಾರಿಸಲು ಸಾಕಶ್ಟು ಹಣ/ ಹೊತ್ತು ಕರ‍್ಚುಹ ಮಾಡುತ್ತಿವೆ. 3D-ಅಚ್ಚುಹಾಕುವಿಕೆ ಮೂಲಕ ಇದೆಲ್ಲವನ್ನು ಕಡಿತಗೊಳಿಸಿ ಬೇಕಾದ ವಸ್ತುಗಳ ಮಾದರಿ ತಯಾರಿಸಬಹುದಾಗಿದೆ. ಬಾನೋಡ, ತಾನೋಡ ತಯಾರಿಕೆ ಕೂಟಗಳು ಸೇರಿದಂತೆ ವಿವಿದ ಕಯ್ಗಾರಿಕೆಗಳಿಗೆ 3D-ಅಚ್ಚುಹಾಕುವಿಕೆಯೇ ಬವಿಶ್ಯವಾಗಿರಲಿದೆ ಎಂಬುದು ಪಂಡಿತರ ಅಂಬೋಣ. ಇದಕ್ಕೆ ಇಂಬುಕೊಡುವಂತೆ , ಲಾಯ್ಟ್‌ರೈಡರ‍್(LightRider) ಎಂಬ ಮಿಂಚಿನ ಇಗ್ಗಾಲಿ ಬಂಡಿಯ ಮಾದರಿಯೊಂದನ್ನು 3D-ಅಚ್ಚುಹಾಕುವಿಕೆಯಿಂದ ತಯಾರಿಸಲಾಗಿದೆ. ಏರ‍್‌ಬಸ್(AirBus) ಎಂಬ ಪ್ರಕ್ಯಾತ ಬಾನೋಡ ಕೂಟದ ಬಾಗವಾಗಿರುವ ಏಪಿ ವರ‍್ಕ್ಸ್(AP Works) ಎಂಬ ಸಂಸ್ತೆ ಲಾಯ್ಟ್‌ರೈಡರ‍್‌ನ ಮೊದಲ ಮಾದರಿ ತಯಾರಿಸಿದೆ.

ಕಡಿಮೆ ತೂಕದ ಕಾರ‍್ಬನ್ ಪಾಯ್ಬರ್ ಗಾಲಿ(Lightweight Carbon fiber wheels):

mustang-gtr-carbon-fiber-wheel

ಪೋರ‍್ಡ್ಲ ಮುಸ್ಟ್ಯಾಂಗ್ ಶೆಲ್ಬಾಯ್ 350TR ಎಂಬ ಬಂಡಿ ಕಡಿಮೆ ತೂಕದ ಗಾಲಿಗಳನ್ನು ಅಳವಡಿಸಿಕೊಂಡಿದೆ. ಸಾಮಾನ್ಯ ಬಂಡಿಗಳು ಅಲ್ಯುಮಿನಿಯಮ್‌ನಿಂದ ಮಾಡಲ್ಪಟ್ಟ ಗಾಲಿಗಳನ್ನು ಬಳಸಿದರೆ, ಶೆಲ್ಬಾಯ್ 350-TR ಬಂಡಿಗೆ ಕಾರ‍್ಬೆನ್ ಪಾಯ್ಬರ್‍ನಿಂದ ಮಾಡಲ್ಪಟ್ಟ ಗಾಲಿಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಗಾಲಿಗಳಿಗಿಂತ ಇದು ಸುಮಾರು 7 ಕಿಲೋಗ್ರಾಮ್‌ನಶ್ಟು ಹಗುರವಾಗಿದೆ. ಈ ರೀತಿ ಬಂಡಿಯ ಬಿಡಿಬಾಗಗಳ ತೂಕ ಹಗುರಗೊಳಿಸಿ ಬಂಡಿಗಳ ಒಟ್ಟು ತೂಕ ಹಗುರವಾಗಿಸುವುದು, ಬಿಣಿಗೆಯ ಉರುಬಲ್ಮೆಯನ್ನು(Fuel Efficiency) ಹೆಚ್ಚಿಸುತ್ತದೆ.

ಹೆಚ್‌ಡಿ ದಾರಿತಿಟ್ಟ ಅಳವಡಿಸಿಕೊಂಡ ಬಂಡಿಗಳು:

hd-here-live-map

ಹೆಚ್‍ಡಿ ಹಿಯರ‍್ ದಾರಿತಿಟ್ಟ

ನೋಕಿಯಾದ ಅಂಗ ಸಂಸ್ತೆ ಹಿಯರ‍್(HERE) ಎಂಬುದು ದಾರಿತಿಟ್ಟ(Maps), ತಲುಪುದಾರಿ ಏರ‍್ಪಾೂಟು ತಯಾರಿಸುವುದರಲ್ಲಿ ಮುಂದಿದೆ. ಇದೇ ಹಿಯರ್ ಕೂಟದವರು ಹೆಚ್‌ಡಿ ಗುಣಮಟ್ಟದ ತಲುಪುದಾರಿ ಏರ‍್ಪಾಟಟುಗಳನ್ನು(Navigation System) ತಯಾರಿಸಿ ವಿವಿದ ಕಾರುಗಳಲ್ಲಿ ಅಳವಡಿಸಿ ಒರೆಹಚ್ಚಿದ್ದಾರೆ. ಉತ್ತರ ಅಮೇರಿಕಾ ಮತ್ತು ಯುರೋಪಿನ ವಿವಿದ ನಾಡುಗಳಲ್ಲಿ ಈ ತಲುಪುದಾರಿ ಏರ‍್ಪಾಿಟನ್ನು ಒರೆಹಚ್ಚಲಾಗಿದ್ದು, ಈ ಹಿಂದಿನ ತಲುಪುದಾರಿ ಏರ‍್ಪಾರಟುಗಳಿಗಿಂತ ಇದು ಹೆಚ್ಚು ಕರಾರುವಕ್ಕಾಗಿ ಮಾಹಿತಿ ಒದಗಿಸಿದೆ. ಬೀದಿ, ಹೆದ್ದಾರಿಗಳಲ್ಲಿ ಬರುವ ಚಿಕ್ಕ ಪುಟ್ಟ ಅಡೆತಡೆ, ವೇಗದ ಮಿತಿ, ಸುತ್ತಲಿನ ವಸ್ತುಗಳ ಎಲ್ಲ ಮಾಹಿತಿ ಒದಗಿಸಿ ಜಿಪಿಎಸ್(GPS) ಏರ‍್ಪಾ ಟಿಗಿಂತ ಮೇಲುಗೈ ಸಾದಿಸಿದೆ. 10 ಸೆಂಟಿಮೀಟರ‍್‌ಗಳಶ್ಟು ಚಿಕ್ಕದಳತೆಯ ನಿಕರತೆಯೊಂದಿಗೆ ಮಾಹಿತಿ ನೀಡುವ ಹಿಯರ‍್‌ನವರ ದಾರಿತಿಟ್ಟ ಎಲ್ಲ ಬಂಡಿ ತಯಾರಕ ಕೂಟಗಳ ಕುತೂಹಲ ಹೆಚ್ಚಿಸಿದೆ. ಅದರಲ್ಲೂ ತನ್ನಿಂದ ತಾನೇ ಸಾಗುವ ಕಾರು ತಯಾರಕರು ಹಿಯರ‍್‌ನ ಈ ಹೆಚ್‌ಡಿ ದಾರಿತಿಟ್ಟಗಳ ಬಳಕೆಗೆ ಹೆಚ್ಚಿನ ಒಲವು ತೋರಿದ್ದಾರೆ.

ಮಾತನಾಡುವ ಕಾರುಗಳು:

mercedes-car-e-class

ಮರ‍್ಸಿಡಿಸ್ ಈ-ಕ್ಲಾಸ್

ಹಿಂದೊಮ್ಮೆ ಇಂಟರ‍್‌ನೆಟ್ ಆಪ್ ತಿಂಗ್ಸ್ ಬರಹದಲ್ಲಿ ತಿಳಿಸಿದಂತೆ ವಸ್ತುಗಳು ತಮ್ಮ ನಡುವೆ ಮಾತುಕತೆ ನಡೆಸಬಲ್ಲವು. ಅದರಂತೆ ಕಾರುಗಳು ಒಂದಕ್ಕೊಂದು ಮಾತನಾಡಬಲ್ಲವು. ಮರ‍್ಸಿಡಿಸ್ ಈ-ಕ್ಲಾಸ್ ಮಾದರಿ ಕಾರುಗಳಲ್ಲಿ ಮಾಡಿದ ಒರೆಹಚ್ಚುವಿಕೆಯ ಕೆಲಸದಿಂದ ಇದು ದಿಟವಾಗಿದೆ. ಹೊಸ ಈ-ಕ್ಲಾಸ್ ಬಂಡಿಗಳು ಒಂದಕ್ಕೊಂದು 4G-ಕ್ಲೌಡ್ ಸರ‍್ವರ‍್(Cloud Server) ಬಳಸಿ ಮಾತುಕತೆ ನಡೆಸುವಲ್ಲಿ ಅಂದರೆ ಎರಡು ಕಾರುಗಳು ಒಂದಕ್ಕೊಂದು ತಮ್ಮ ನಡುವೆ ಸಂದೇಶ ಹಂಚಿಕೊಂಡು ಗೆಲುವು ಕಂಡಿದ್ದು. ಇದನ್ನು ಇನ್ನಶ್ಟು ಗಟ್ಟಿಗೊಳಿಸಿ ಹೆಚ್ಚಿನ ಕಾರುಗಳಲ್ಲಿ ಅಳವಡಿಸುವುದು ಮರ‍್ಸಿಡಿಸ್‌ನವರ ಗುರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: