ಎಳೆ ಹಲಸಿನಕಾಯಿ ಪಲ್ಯವನ್ನು ಮಾಡುವ ಬಗೆ

ರೇಶ್ಮಾ ಸುದೀರ್.

img-20161224-wa0008

ಬೇಕಾಗುವ ಸಾಮಾನುಗಳು:

ಎಳೆ ಹಲಸಿನಕಾಯಿ (ಹಲಸಿನ ಗುಜ್ಜೆ/ಹಲಸಿನ ಬಡ್ಕು) – 1
ನೆನೆಸಿದ ಕಡಲೆಕಾಳು – 1 ಲೋಟ
ತೆಂಗಿನಕಾಯಿ ತುರಿ – 1/2 ಲೋಟ
ನೀರುಳ್ಳಿ – 1 ಗೆಡ್ಡೆ
ಬೆಳ್ಳುಳ್ಳಿ – ಗೆಡ್ಡೆ
ಟೊಮೆಟೋ – 1
ಅಚ್ಚಕಾರದ ಪುಡಿ – 4 ಟಿ ಚಮಚ
ದನಿಯಾ ಪುಡಿ – 1/2 ಟಿ ಚಮಚ
ಜೀರಿಗೆ ಪುಡಿ – 1/2 ಟಿ ಚಮಚ
ಅರಿಸಿನ – ಚಿಟಿಕೆ
ಎಣ್ಣೆ – 1 ಚಮಚ
ಹುಣಸೆ ಹಣ್ಣು – 1 ನೆಲ್ಲಿಕಾಯಿ ಗಾತ್ರ

ಮಾಡುವ ಬಗೆ:

ಎಳೆಯ ಹಲಸಿನ ಕಾಯಿಯನ್ನು ಸಿಪ್ಪೆ ತೆಗೆದು ಉದ್ದಕ್ಕೆ ಹೆಚ್ಚಿ ಕುಕ್ಕರಿನಲ್ಲಿ ಬೇಯಲು ಇಡಿ. ಬೇಯಲು ಹಾಕುವಾಗ ಎರಡು ಟಿ ಚಮಚ ಕಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಗೂ ಹುಣಸೆಹಣ್ಣನ್ನು ಹಾಕಿ ಒಂದು ಅತವಾ ಎರಡು ವಿಶಲ್ ಬರಿಸಿ. ತಣ್ಣಗೆ ಆದ ನಂತರ ಕುಕ್ಕರಿನಿಂದ ತೆಗೆದು ಒಂದು ತಟ್ಟೆಗೆ ಹಾಕಿಕೊಂಡು ಕೈಯಲ್ಲಿ ಹಿಸುಕಿ ಸಣ್ಣಗೆ ಪುಡಿ ಮಾಡಿಕೊಳ್ಳಿ. ಕುಕ್ಕರಿನಲ್ಲಿ ಉಳಿದ ನೀರಿಗೆ ಕಡಲೆ ಕಾಳುಗಳನ್ನು ಹಾಕಿ ಇನ್ನೊಂದು ವಿಶಲ್ ಬರಿಸಿ (ಇಲ್ಲವಾದಲ್ಲಿ ಹಲಸಿನಕಾಯಿ ಬೇಯಿಸುವಾಗ ಒಟ್ಟಿಗೆ ಹಾಕಬಹುದು).

ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದನಂತರ ಹೆಚ್ಚಿದ ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ ಹಾಕಿ. ಬಾಡಿದ ನಂತರ ಟೊಮೆಟೋ ಹಾಕಿ ಬೇಯಿಸಿ ಇದಕ್ಕೆ ಉಳಿದ ಕಾರದ ಪುಡಿ ಹಾಕಿ, ಚಿಟಿಕೆ ಅರಸಿನ ಹಾಕಿ ಬೇಯಿಸಿಟ್ಟ ಹಲಸಿನ ಕಾಯಿ ಹಾಗೂ ಕಾಳುಗಳನ್ನು ಹಾಕಿ, ರುಚಿಗೆ ತಕ್ಕಶ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ, ಕೊನೆಗೆ ತುರಿದ ತೆಂಗಿನಕಾಯಿಯನ್ನು ಹಾಕಿ ತಿರುವಿದರೆ ರುಚಿಯಾದ ಎಳೆಹಲಸಿನಕಾಯಿ ಪಲ್ಯ ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: