ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ.

ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು ಮೆರೆದಿದ್ದು ಪಿನ್‍ಲ್ಯಾಂಡಿನ ಕಂಪನಿ ನೋಕಿಯಾ. ಅಲೆಯುಲಿಯ ಚಳಕಗಳು ಬೆಳೆದಂತೆ ಚೂಟಿಯುಲಿಗಳ(smartphone) ಮಾರುಕಟ್ಟೆ ಗರಿಗೆದರಿಕೊಂಡು ನಿಂತಿತು. ಈ ಬದಲಾವಣೆಗೆ ಒಗ್ಗಿಕೊಳ್ಳಲು ನೋಕಿಯಾ ಕೂಡ ಸಿಂಬಿಯಾನ್ ನಡೆಸೇರ‍್ಪಾಟನ್ನು(Operating System) ಬಳಸಿ ‘ನೋಕಿಯಾ ಎಕ್ಸ್ 6’ ನಂತಹ ಚೂಟಿಯುಲಿಗಳನ್ನು ಹೊರತಂದಿತು. ಆದರೆ ಸ್ಯಾಮಸಂಗ್, ಸೋನಿ, ಮೊಟೊರೋಲಾ ಮುಂತಾದ ದೊಡ್ಡ ಕಂಪನಿಗಳು ಆಂಡ್ರಾಯ್ಡ್ ನಡೆಸೇರ‍್ಪಾಟನ್ನು ಬಳಸಿಕೊಂಡು ಹೊರತಂದ ಚೂಟಿಯುಲಿಗಳು, ಹಾಗೂ ತನ್ನದೇ ನಡೆಸೇರ‍್ಪಾಟಿನ ಜೊತೆ ಹೊರಬಂದ ಆಪಲ್ ಚೂಟಿಯುಲಿಗಳು ನೋಕಿಯಾದ ಮಾರುಕಟ್ಟೆಯ ಹಿಡಿತವನ್ನು ಕಬಳಿಸಿದವು.

ಪೈಪೋಟಿಯಿಂದ ಹಿಂದೆ ಸರಿಯಲು ಬಯಸದ ನೋಕಿಯಾದವರು ಅಮೇರಿಕಾದ ಮೈಕ್ರೋಸಾಪ್ಟ್ ಕಂಪನಿಯವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು, ವಿಂಡೋಸ್ ನಡೆಸೇರ‍್ಪಾಟಿನ ಲೂಮಿಯಾ ಚೂಟಿಯುಲಿಗಳನ್ನು ಹೊರತಂದರು. ಆಂಡ್ರಾಯ್ಡ್ ಹಾಗೂ ಆಪಲ್ ಗಳ ನಡುವೆ ಲೂಮಿಯ ಸರಣಿಗಳು ಹೇಳಿಕೊಳ್ಳುವಂತಹ ಹೆಸರನ್ನು ಮಾಡಲಿಲ್ಲ. ಇನ್ನೇನು ನೋಕಿಯಾ ಹೆಸರು ಮಸುಕಾಗಿ ಮರೆಯಾಗುವುದು ಎಂಬಂತಿತ್ತು. ಆದರೆ 2016ಕ್ಕೆ ಮೈಕ್ರೋಸಾಪ್ಟ್ ಜೊತೆಗಿನ ಒಡಂಬಡಿಕೆ ಮುಗಿದ ಕೂಡಲೇ ನೋಕಿಯಾ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಸಿದ್ದತೆಯನ್ನು ಮಾಡಿಕೊಂಡಿತು.

ನೋಕಿಯಾ ಕಂಪನಿಯಲ್ಲಿ ಮೊದಲು ಕೆಲಸ ಮಾಡುತ್ತಿದ್ದ ಹಳೆ ಕೆಲಸಗಾರರಲ್ಲಿ ಹಲವರು ಒಂದಾಗಿ ಎಚ್‍ಎಮ್‍ಡಿ ಎಂಬ ಕಂಪನಿಯನ್ನು ಹುಟ್ಟುಹಾಕಿದರು. ಹಿಂದೊಮ್ಮೆ ನೋಕಿಯಾ ಕಂಪನಿಯಲ್ಲಿ ಮೆಲುಗರಾಗಿದ್ದ ಅರ‍್ತೊ ನುಮ್ಮೆಲ ಇದರ ಮುಂದಾಳುವಾದರು. ಮೈಕ್ರೋಸಾಪ್ಟ್ ಜೊತೆಗಿನ ಒಡಂಬಡಿಕೆ ಮುಗಿದ ಕೂಡಲೆ ನೋಕಿಯಾ ಬ್ರಾಂಡ್ ಅನ್ನು ಎಚ್‍ಎಮ್‍ಡಿಯವರು ಕೊಂಡು, ನೋಕಿಯಾ ಹೆಸರಿನಲ್ಲಿ ಆಂಡ್ರಾಯ್ಡ್ ನಡೆಸೇರ‍್ಪಾಟನ್ನು ಬಳಸಿ ಹೊಸ ಚೂಟಿಯುಲಿಗಳನ್ನು ಬಿಡುಗಡೆ ಮಾಡುವ ತೀರ‍್ಮಾನ ತೆಗೆದುಕೊಂಡರು. ಅದರಂತೆ ನೋಕಿಯಾ 6, 5 ಹಾಗೂ 3 ಎಂಬ ಮೂರು ಚೂಟಿಯುಲಿಗಳು ಈಗ ಜಗತ್ತಿನ ಹಲವು ನಾಡುಗಳಲ್ಲಿ ಬಿಡುಗಡೆಯಾಗಿವೆ. ಅಮೇರಿಕಾದ ಮೈಕ್ರೋಸಾಪ್ಟ್ ಕಂಪನಿಯ ಕೈಯಲ್ಲಿದ್ದ ನೋಕಿಯಾ ಮರಳಿ ಮಣ್ಣಿಗೆ ಎನ್ನುವಂತೆ ಪಿನ್‍ಲ್ಯಾಂಡಿನ ಎಚ್‍ಎಮ್‍ಡಿಯವರ ಕೈಗೆ ಬಂದಿದೆ.

ಎಚ್‍ಎಮ್‍ಡಿಯವರು ನೋಕಿಯಾ-ಆಂಡ್ರಾಯ್ಡ್ ಚೂಟಿಯುಲಿಗಳನ್ನು ಹೊರತರಲಿದ್ದಾರೆ ಎಂದಾಗಲೇ ‘ಮಾರುಕಟ್ಟೆಯಲ್ಲಿ ಒಂದು ದೊಡ್ಡ ಬಿರುಗಾಳಿ ಏಳುವ ಮುನ್ಸೂಚನೆ ಇದು’ ಎಂದು ಹಲವರು ಅಂದುಕೊಂಡಿದ್ದರು. ಅದರಂತೆ ನೋಕಿಯಾ 6 ಚೀನಾದಲ್ಲಿ ಬಿಡುಗಡೆಯಾಗಿ ಬಿರುಸಾದ ಮಾರಾಟವನ್ನು ಕಂಡಿದೆ. ನೋಕಿಯಾ 6, 5 ಹಾಗೂ 3 ಯೂರೋಪಿನ ಹಲವು ಮಾರುಕಟ್ಟೆಗಳಲ್ಲಿ ದೊಡ್ಡ ಸದ್ದನ್ನು ಮಾಡುತ್ತಿವೆ. ಇಂಡಿಯಾ ಮಾರುಕಟ್ಟೆಗೆ ಮಾರ‍್ಚ್, 2017 ರ ಕೊನೆಯ ವಾರದಲ್ಲಿ ಈ ಚೂಟಿಯುಲಿಗಳು ಬರಲಿವೆ.

ಹೊಸ ನೋಕಿಯಾ ಮೇಲೊಂದು ಕಿರುನೋಟ:

ನೋಕಿಯಾ 6 – ಈಗ ಹೆಸರುವಾಸಿಯಾಗಿರುವ ಚೂಟಿಯುಲಿಗಳಲ್ಲಿ ಹೆಚ್ಚಿನವು 5.5 ಇಂಚಿನ ತೆರೆಯನ್ನು ಹೊಂದಿವೆ. ಇವಕ್ಕೆ ಪೈಪೋಟಿಯನ್ನು ನೀಡಲು ನೊಕಿಯಾ 6 ಅನ್ನು ಅಣಿಗೊಳಿಸಲಾಗಿದೆ. ಇದರ ಚೆಂದದ ವಿನ್ಯಾಸ ಮತ್ತು ಗಟ್ಟಿತನ ಮಂದಿಯನ್ನು ಸೆಳೆಯಲಿದೆ ಎಂಬುದು ಕಂಪನಿಯವರ ನಂಬಿಕೆ.

ನೊಕಿಯಾ 5 – 5 ಇಂಚಿನ ತೆರೆಯ ಈ ಚೂಟಿಯುಲಿಯು ಮೊಟೊರೊಲಾ ಹಾಗೂ ಸೋನಿ ಚೂಟಿಯುಲಿಗಳಿಗೆ ಪೈಪೋಟಿ ನೀಡಲಿದೆ. ತನ್ನ ವಿಶೇಶವಾದ ಅಲ್ಯುಮಿನಿಯಮ್ ಮೈಕಟ್ಟಿನಿಂದ ಇದು ಮಂದಿಯನ್ನು ಸೆಳೆಯಲಿದೆ.

ನೋಕಿಯಾ 3 – ಕಡಿಮೆ ದುಡ್ಡಿನಲ್ಲಿ ಒಂದೊಳ್ಳೆ ಬ್ರಾಂಡಿನ ಚೂಟಿಯುಲಿ ಬೇಕು ಎನ್ನುವವರ ಬೇಡಿಕೆಯನ್ನು ಇದು ಈಡೇರಿಸಲಿದೆ. ಪಾಲಿಕಾರ‍್ಬೊನೆಟ್‍ನಿಂದ ಮಾಡಿದ ಇದರ ಬೆನ್ನು ಚೂಟಿಯುಲಿಯು ಕೈಯಿಂದ ಜಾರದಂತೆ ಹಿಡಿದುಕೊಂಡು ಬಳಸಲು ನೆರವಾಗಲಿದೆ. ಎರಡೂ ಬದಿಯ ಕ್ಯಾಮೆರಾಗಳು 8 ಮೆಗಾ ಪಿಕ್ಸೆಲ್‍ನದಾಗಿದ್ದು, ತನ್ನಿ(selfie)ಯ ಒಲವಿರುವವರಿಗೆ ಮೆಚ್ಚುಗೆಯಾಗಲಿದೆ.

ನೋಕಿಯಾ 6, 5, 3 ರಲ್ಲಿ ಏನೇನಿದೆ?

ನೋಕಿಯಾ 6 ನೋಕಿಯಾ 5 ನೋಕಿಯಾ 3
ಬಣ್ಣಗಳು ಆರ‍್ಟೆ ಬ್ಲಾಕ್, ಮ್ಯಾಟ್ ಬ್ಲಾಕ್,
ಟೆಂಪರ‍್ಡ್ ಬ್ಲೂ, ಬೆಳ್ಳಿ ಮತ್ತು ತಾಮ್ರದ ಬಣ್ಣ
ಮ್ಯಾಟ್ ಬ್ಲಾಕ್, ಟೆಂಪರ‍್ಡ್ ಬ್ಲೂ,
ಬೆಳ್ಳಿ ಮತ್ತು ತಾಮ್ರದ ಬಣ್ಣ
ಮ್ಯಾಟ್ ಬ್ಲಾಕ್, ಟೆಂಪರ‍್ಡ್ ಬ್ಲೂ,
ಬೆಳ್ಳಿ ಮತ್ತು ತಾಮ್ರದ ಬಣ್ಣ
ನಡೆಸೇರ‍್ಪಾಟು (OS) ಆಂಡ್ರಾಯ್ಡ್ ಎನ್(7.1.1) ಆಂಡ್ರಾಯ್ಡ್ ಎನ್(7.1.1) ಆಂಡ್ರಾಯ್ಡ್ ಎನ್(7.0)
ರಾಮ್ (RAM) ಆರ‍್ಟೆ ಬ್ಲಾಕ್ 4 ಜಿಬಿ,
ಉಳಿದ ಬಣ್ಣಗಳು 3 ಜಿಬಿ
2 ಜಿಬಿ 2 ಜಿಬಿ
ನಡು ಬಗೆವ ಬಿಡಿ (CPU) ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 430 ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 430 MTK 6737, ಕ್ವಾಡ್ ಕೋರ್ 1.3Ghz
ಅಳತೆ 154×75.8×7.85 ಮಿ.ಮೀ 149.7 x 72.5 x 8.05 ಮಿ.ಮೀ 143.4 x 71.4 x 8.48 ಮಿ.ಮೀ
ನೆನಪು ಆರ‍್ಟೆ ಬ್ಲಾಕ್ – 64 ಜಿಬಿ, ಉಳಿದ ಬಣ್ಣಗಳು 32 ಜಿಬಿ
128 ಜಿಬಿ ವರೆಗೆ ನೆನಪಿನ ಬಿಲ್ಲೆಗಳನ್ನು ಬಳಸಬಹುದು
16 ಜಿಬಿ
128 ಜಿಬಿ ವರೆಗೆ ನೆನಪಿನ ಬಿಲ್ಲೆಗಳನ್ನು ಬಳಸಬಹುದು
16 ಜಿಬಿ
128 ಜಿಬಿ ವರೆಗೆ ನೆನಪಿನ ಬಿಲ್ಲೆಗಳನ್ನು ಬಳಸಬಹುದು
ತೆರೆ 5.5 ಇಂಚು ಐಪಿಎಸ್ ಎಲ್ ಸಿ ಡಿ,
1920*1080 ಚುಕ್ಕಿದಟ್ಟಣೆ
ಕಾರ‍್ನಿಂಗ್ ಗೊರಿಲ್ಲಾ ಗ್ಲಾಸ್ 3
ಪಿಕ್ಸೆಲ್ 403 ಪಿಪಿಐ
5.2 ಇಂಚು ಐಪಿಎಸ್ ಎಲ್ ಸಿ ಡಿ,
1280*720 ಚುಕ್ಕಿದಟ್ಟಣೆ
ಕಾರ‍್ನಿಂಗ್ ಗೊರಿಲ್ಲಾ ಗ್ಲಾಸ್ 3
5.0 ಇಂಚು ಐಪಿಎಸ್ ಎಲ್ ಸಿ ಡಿ,1280*720 ಚುಕ್ಕಿದಟ್ಟಣೆ
ಕಾರ‍್ನಿಂಗ್ ಗೊರಿಲ್ಲಾ ಗ್ಲಾಸ್ 3
ಕ್ಯಾಮೆರಾ ಹಿಂಬದಿ – 16 MP PDAF, 1um, f/2, dual tone flash
ಮುಂಬದಿ – 8 MP AF, 1um, f/2
ಹಿಂಬದಿ – 13 MP PDAF, 1.12um, f/2, dual tone flash
ಮುಂಬದಿ – 8 MP AF, 1.12um, f/2
ಹಿಂಬದಿ – 8 MP AF, 1.12um, f/2, LED flash
ಮುಂಬದಿ – 8 MP AF, 1.12um, f/2
ಅರಿವುಕಗಳು ಉರುಬೇರಿಕೆಯಳಕ, ಸುತ್ತಣ ಬೆಳಕರಿವುಕ (ambient light sensor), ಕೈವಾರ, ಹಾಲ್ (Hall) ಅರಿವುಕ, ಬೆರಳಚ್ಚು ಅರಿವುಕ(Fingerprint sensor), ಸುತ್ತಳೆಕ (gyroscope), ಬದಿ ಅರಿವುಕ (Proximity sensor), ನೆರೆಯರುಹು(Near Field Communication) ಉರುಬೇರಿಕೆಯಳಕ, ಸುತ್ತಣ ಬೆಳಕರಿವುಕ, ಕೈವಾರ, ಬೆರಳಚ್ಚು ಓದುಗ, ಸುತ್ತಳೆಕ, ಬದಿ ಅರಿವುಕ, ನೆರೆಯರುಹು
ಮಿಂಕಟ್ಟು (Battery) 3000mAH 2650 mAH
ಮಿಂಬಲೆ ಚಳಕ (Network Technology) GSM: 850/900/1800/1900; WCDMA: Band 1, 2, 5, 8;

LTE: Band 1, 3, 5, 7, 8, 20, 28, 38, 40

ಉರುಬು(speed) – LTE Cat. 4, 150Mbps DL/50Mbps UL

ಹೊಂದಾಣಿಕೆ (Connectivity ) ಮೈಕ್ರೋ ಯು ಎಸ್ ಬಿ (ಯು.ಎಸ್.ಬಿ ೨.೦), ಯುಎಸ್ ಬಿ ಒಟಿಜಿ, ವೈಪೈ, ಬ್ಲೂಟೂತ್ ೪.೧

(ಮಾಹಿತಿ ಮತ್ತು ಚಿತ್ರ ಸೆಲೆ: www.nokia.com, techstunt.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: