ಮನಸೇ ಕೊರಗದಿರು ಹೀಗೆ…

– ಸುರಬಿ ಲತಾ.

ಮನಸೇ ಕೊರಗದಿರು ಹೀಗೆ
ಎದೆಯು ಬಿರಿಯುವ ಹಾಗೆ
ಗೆಲುವೇ ಎಂದಿಗು ನಿನಗೆ
ಸಹಿಸು ನೀನು ಬೇಗೆ

ಇವೆಲ್ಲವೂ ಕಡಲ ಅಲೆಯಂತೆ
ಕ್ಶಣಿಕದ ನೋವು ನಲಿವಂತೆ
ಇರಬೇಕು ನಗು ನಗುತ
ಕಹಿಯನ್ನು ಮರೆಯುತ

ಮನಸೇ ಕೊರಗದಿರು ಹೀಗೆ
ಎದೆಯು ಬಿರಿಯುವ ಹಾಗೆ

ಸಾದಿಸು ನೀನು ಚಲದಿಂದ
ಗೆಲ್ಲು ನೀನು ಬಲದಿಂದ
ಆಗಲೇ ಎಲ್ಲರೂ ನಿನಗೆ
ತೋರುವರು ಮುಗುಳುನಗೆ

ಮನಸೇ ಕೊರಗದಿರು ಹೀಗೆ
ಎದೆಯು ಬಿರಿಯುವ ಹಾಗೆ

ಹರಸುವರು ಎಲ್ಲರೂ ಒಂದು ದಿನ
ತಣಿಯುವ ಹಾಗೆ ಮನ
ಕಳೆದು ಹೋದ ಸ್ನೇಹ
ಬರುವುದು ನಿನ್ನ ಸನಿಹ

ಮನಸೇ ಕೊರಗದಿರು ಹೀಗೆ
ಎದೆಯು ಬಿರಿಯುವ ಹಾಗೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: