ರವಿಚಂದ್ರರಿರುವವರೆಗೆ ಹರಿಯುತಿರು ಹೊನಲೇ..
ನಾಲ್ಕು ನಲ್ಮನದ
ಅಕ್ಕರ ಪ್ರೀತಿ
ಕನ್ನಡದ ಮೇಲೆ
ಕಕ್ಕುಲಾತಿ ಒಲಿಯಲಿ
ಎಂಬೊಲವು ಮಾಗಿ
ಹರಿದಿತ್ತು ಹೊನಲಾಗಿ
ಓದುವಗೆ ಕಣ್ತಂಪು
ಕನ್ನಡದ ಮನಕಿಂಪು
ಮಿಂದಾಣದಿ ತೋರಿ
ಮತಾಪಿನ ಸೊಗಡ,
ಹೊತ್ತು, ಎತ್ತೊಯ್ದು
ಎಲ್ಲರ ಕನ್ನಡ
ಸುಡುವ ಸೂರ‍್ಯನ
ಸುತ್ತ ನಾಕು
ಸುತ್ತು ಬರ‍್ತಿ
ತಿಂಗಳು ಬೆಳಕ
ಊರೆಲ್ಲ ಬಿತ್ತಿ
ರವಿಚಂದ್ರರಿರುವವರೆಗೆ
ಹರಿಯುತಿರು
ಹೊನಲೇ,
ತುಂಬಿಹೋಗಲಿ
ನನ್ನ ಕನ್ನಡ
ಶರದಿ ತೆರದಿ
ಸಾಕು,ಸಾಕು
ಸಾಕೆನ್ನಲಿ
ವಸುದೆ ಮುಸುಕಿದ
ಕಡಲೇ.
ಇತ್ತೀಚಿನ ಅನಿಸಿಕೆಗಳು