ಒಂಟಿ ನಾನಿಲ್ಲಿ, ನಿನ್ನ ನೆನೆ ನೆನೆದು…
– ಸುರಬಿ ಲತಾ.
ಒರಟು ಬಂಡೆಯ ಮೇಲೆ
ಒರಗಿ ಕೂತೆ ಕೆತ್ತಿದ ಶಿಲೆಯಂತೆ
ಬೀಸುವ ತಂಗಾಳಿಯೂ ಬಿಸಿಯಾಯಿತು
ಕಾಡುತಿದೆ ನಿನ್ನದೇ ಚಿಂತೆ
ಸುತ್ತಲೂ ಜನಗಳು ಸವಿಯುತಿಹರು
ಸುಂದರ ಪ್ರಕ್ರುತಿಯ ಸೊಬಗು
ಜೊತೆ ನೀ ಇರದೇ ಮನದಲ್ಲಿ ಕಾಡುತಿದೆ
ನಿನ್ನದೇ ಕೊರಗು
ತಬ್ಬಿ ನಡೆಯುತಿಹರು ಇನಿಯನ,
ಕಣ್ಣ ಮುಂದೆ ಎಲ್ಲಾ ಗೆಳತಿಯರು
ಒಂಟಿ ನಾನಿಲ್ಲಿ, ನಿನ್ನ ನೆನೆ ನೆನೆದು
ಸೋಲುತಿಹೆನು ಸುರಿಸುತ ಕಣ್ಣೀರು
(ಚಿತ್ರ ಸೆಲೆ: spectator.com.au)
ಇತ್ತೀಚಿನ ಅನಿಸಿಕೆಗಳು