ಅವಳೇ ಅವಳು, ಉಸಿರನು ಇತ್ತವಳು

– ಸಿಂದು ಬಾರ‍್ಗವ್.

 

ಅವಳೇ ಅವಳು
ಕೂಸನು ಹೊತ್ತವಳು
ಉಸಿರನು ಇತ್ತವಳು

ಅವಳೇ ಅವಳು
ಹಸುಳೆಯ ಹೆತ್ತವಳು
ಹೆಸರನು ಕೊಟ್ಟವಳು

ಅವಳೇ ಅವಳು
ಕನಸನು ಉತ್ತವಳು
ಸೋಲಲಿ ಜೊತೆಯವಳು

ಅವಳೇ ಅವಳು
ತ್ಯಾಗಕೆ ಹೆಸರವಳು
ಸಹನೆಯ ಕೊರಡವಳು

ಅವಳೇ ಅವಳು
ಎಲ್ಲರಲಿ ಉತ್ತಮಳು
ನಮ್ಮನು ಹೆತ್ತವಳು

(ಚಿತ್ರಸೆಲೆ: sproulegenealogy.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks