ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ
ಬೇಕಾಗುವ ಸಾಮಾಗ್ರಿಗಳು:
ಬೂದು ಕುಂಬಳಕಾಯಿ- 1 ಲೋಟ
ಬೆಲ್ಲ – 1/4 ಇಂಚು
ಜೀರಿಗೆ – 1 ಚಮಚ
ಅಕ್ಕಿ – 1 ಚಮಚ
ದನಿಯಾ – 1/2 ಚಮಚ
ತೆಂಗಿನ ತುರಿ – 1 ಸಣ್ಣ ಲೋಟ
ಹಸಿಮೆಣಸಿನಕಾಯಿ – 4
ಮೊಸರು -1 ಲೋಟ
ಕರಿಬೇವು – 10-12 ಎಸಳು
ಶುಂಟಿ – 1/2 ಇಂಚು
ತುಪ್ಪ – 2 ಚಮಚ
ಮಾಡುವ ಬಗೆ:
ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಅದು ಕಾದ ನಂತರ ಅಕ್ಕಿಯನ್ನು ಹುರಿಯಬೇಕು. ನಂತರ ಜೀರಿಗೆ, ದನಿಯಾ ಹುರಿಯಬೇಕು, ಆನಂತರ ಇದಕ್ಕೆ ಶುಂಟಿ, ಹಸಿಮೆಣಸು, ತೆಂಗಿನತುರಿ, ಚಿಟಿಕೆ ಅರಿಶಿನ, ಒಂದೆರಡು ಕರಿಬೇವಿನ ಎಸಳು ಹಾಕಿ ಚೆನ್ನಾಗಿ ಹುರಿದು, ತಣ್ಣಗಾದ ನಂತರ ರುಬ್ಬಬೇಕು.
ಒಂದು ಪಾತ್ರೆಗೆ ನೀರು ಹಾಕಿ ತುಂಡುಮಾಡಿದ ಬೂದುಗುಂಬಳಕಾಯಿ ಹಾಗೂ ಉಪ್ಪುನ್ನು ಹಾಕಿ ಬೇಯಿಸಿ, ಬಳಿಕ ರುಬ್ಬಿದ ಮಸಾಲೆ ಹಾಕಿ ಕುದಿಸಿ, ಆನಂತರ ಬೆಲ್ಲ, ಮೊಸರು ಹಾಕಿ. ಇದಕ್ಕೆ ತುಪ್ಪದಲ್ಲಿ ಹುರಿದ ಜೀರಿಗೆ, ಕರಿಬೇವನ್ನು ಹಾಕಿದರೆ ಮಜ್ಜಿಗೆ ಹುಳಿ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು