ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ

ಮಂಜು.

ಏ ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ
ದಿನವು ನಿನದೇ ನೆನಪು ಮನದಲ್ಲಿ
ಹೋಗುತ್ತಿದ್ದರೂ ದೂರ
ಆಗುತ್ತಿರುವಿ ಇನ್ನೂ ಹತ್ತಿರ
ಕಳೆಯಬೇಡ ಸಮಯ ಚಿಂತೆಯಲ್ಲಿ
ಬಂದು ಕೇಳುವೆನು ಮನೆಯಲ್ಲಿ

ಒಪ್ಪಿದರೆ
ಅನಿಸುತ್ತೆ ನಿಶ್ಚಯವಾಗಿದ್ದು ಸ್ವರ‍್ಗದಲ್ಲಿ
ಒಪ್ಪದಿದ್ದರೂ
ಬದುಕಿರುವೆ ನೀ, ನಾನೆಳೆವ ಕೊನೆಯ ಉಸಿರಲ್ಲಿ

ಅರ‍್ತವಾಗಿವೆ ನಿನ್ನ ಸಂಕಟಗಳೆಲ್ಲ
ಆದರೆ ನನ್ನ ಪ್ರೀತಿ ಕಪಟವಲ್ಲ
ಪ್ರೀತಿಸುಯೆಂಬ ಒತ್ತಾಯ ನನ್ನದಲ್ಲ
ಅಂದುಕೊಂಡಿರುವೆ
ಪ್ರೀತಿಸಬೇಡ ಎಂಬ ಕೋರಿಕೆ ನಿನ್ನದಲ್ಲ

ಜಾತಿ ಅಡ್ಡವಾಗಿದೆ ಈ ಪ್ರೀತಿಗೆ
ಬಂದೊಮ್ಮೆ ನಿಲ್ಲು ಅದರಿಂದಾಚೆಗೆ
ನೀರೆರೆಯಬಹುದು ಈ ಪ್ರೀತಿಯ ಚಿಗುರಿಗೆ
ಹೇಳಿದಹಾಗೆ ನಮ್ಮನೇಲಿದೆ ಒಪ್ಪಿಗೆ

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: