ನೊಂದವಳ ಸಂತೈಸುವವರು ಯಾರು?
– ಸವಿತಾ.
ನೋವಿನಲೂ ನಲಿವಿನಲೂ
ಜೊತೆ ಇರಬೇಕಾದವನು
ಕೈ ಹಿಡಿದ ಪತಿಯು
ಆದರವನು, ಮೋಸ ಮಾಡಿದ
ಅದಿಪತಿ ಆಗಿಹನು
ಅವಳಿಗಾದ ಆಗಾತ ಹೇಳತೀರದು
ಕಶ್ಟವ ಹುಟ್ಟು ಹಾಕಿದವನು
ಜೀವಕೇ ಕುತ್ತು ತಂದವನು
ದುಶ್ಟನಾದರೂ, ಪತಿರಾಯನು
ಅವನಿಂದ ನೋವುಂಡವಳು
ಈ ಸಮಾಜದಲ್ಲಿ ತಿರಸ್ಕ್ರುತಳು
ಅಸಹಾಯಕ ಹೆಣ್ಣು ಆಗಿಹಳು
ಅವಳ ರಕ್ಶಿಸುವವರು ಯಾರು
ಗೌರವ ಮಾನ ಕಾಪಾಡುವವರು ಯಾರು
ಗಂಡ ಬಿಟ್ಟವಳೆಂದು ಪಟ್ಟ ಕಟ್ಟಿಹರು
ನಿಂದಿಸುವವರು ಹಲವರು
ಹೀಗಳೆಯುವವರು ನೂರಾರು ಮಂದಿ
ಕೀಳಾಗಿ ಕಾಣುವ ಜನ ಸುತ್ತಲೂ
ನೊಂದವಳ ಸಂತೈಸುವವರು ಯಾರು?
ಕಶ್ಟವ ಅರ‍್ತಮಾಡಿಕೊಳ್ಳುವವರು ಯಾರು?
ಅವಳ ಪಾಡೇನು?
( ಚಿತ್ರ ಸೆಲೆ: marriage.com )
ಇತ್ತೀಚಿನ ಅನಿಸಿಕೆಗಳು