ಹೀರೆಕಾಯಿ ಸಿಪ್ಪೆ ಚಟ್ನಿ
ಏನೇನು ಬೇಕು?
ಹೀರೆಕಾಯಿ ಸಿಪ್ಪೆ – 1 ಬಟ್ಟಲು
ತೆಂಗಿನತುರಿ – 1 ಬಟ್ಟಲು
ಹಸಿಮೆಣಸು – 3-4
ಹುಣಸೆಹುಳಿ – 1/2 ಗೋಲಿ ಗಾತ್ರದಶ್ಟು
ಶುಂಟಿ – 1/4 ಇಂಚು
ಉದ್ದಿನ ಬೇಳೆ – 1 ಚಮಚ
ಸಾಸಿವೆ ಕಾಳು – 1/4 ಚಮಚ
ಕರಿಬೇವು – 5-6 ಎಸಳು
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ:
ಮೊದಲು ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಹೀರೆಕಾಯಿ ಸಿಪ್ಪೆಯನ್ನು ಹಾಕಿ 3-4 ನಿಮಿಶಗಳ ಕಾಲ ಹುರಿದು ತೆಗೆಯಿರಿ. ಅದೇ ಬಾಣಲೆಗೆ ಹಸಿಮೆಣಸು, ಉದ್ದಿನಬೇಳೆ ಹಾಕಿ ಹುರಿದು ತೆಗೆಯಿರಿ. ಹುರಿದ ಹೀರೆಕಾಯಿ ಸಿಪ್ಪೆ ಹಸಿಮೆಣಸು, ಶುಂಟಿ, ಹುಳಿ, ಉಪ್ಪು, ತೆಂಗಿನತುರಿ ಹಾಗೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಕೊನೆಗೆ ಒಗ್ಗರಣೆ ಬಟ್ಟಲಿಗೆ 1 ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವನ್ನು ಸಿಡಿಸಿ ಅದರ ಒಗ್ಗರಣೆಯನ್ನು ಚಟ್ನಿಗೆ ಹಾಕಿದರೆ ಆರೋಗ್ಯಕರವಾದ ಹೀರೆಕಾಯಿ ಸಿಪ್ಪೆ ಚಟ್ನಿ ಸವಿಯಲು ಸಿದ್ದ.
(ಚಿತ್ರ ಸೆಲೆ: specialtyproduce.com)
ಇತ್ತೀಚಿನ ಅನಿಸಿಕೆಗಳು