ತಾಯಿ ಪ್ರೀತಿ

– ಶಾಂತ್ ಸಂಪಿಗೆ.

ಎಲ್ಲಾ ದೇವರಿಗಿಂತ ಮಿಗಿಲು
ಹೆತ್ತ ತಾಯಿಯ ಪ್ರೀತಿ ನೆರಳು

ನವ ಮಾಸ ನೋವ ಉಂಡು
ಜೀವತುಂಬಿ ಹಡೆದಳು
ಮಡಿಲ ಮಗುವ ನಗುವ ಕಂಡು
ನೋವನೆಲ್ಲಾ ಮರೆತಳು

ಪುಟ್ಟ ಮಗುವಿನ ಬವ್ಯ ಬವಿಶ್ಯದ
ನೂರು ಕನಸು ಕಂಡಳು
ಎಲ್ಲಾ ಕಶ್ಟದ ನೊಗವ ಹೊತ್ತು
ಹಗಲು ರಾತ್ರಿ ದಣಿವಳು

ಹೆಜ್ಜೆ ಇಡಲು ಬರದೆ ಬಿದ್ದರೆ
ಬಿಕ್ಕಿ ತಾನು ಅಳುವಳು
ತೊದಲ ನುಡಿಯ ಮಾತು ಕೇಳಿ
ಜಗವ ಮರೆತು ನಗುವಳು

ಎಲ್ಲಾ ಜನರ ಕಶ್ಟ ಕಾಯಲು
ದೇವರಿಂದ ಆಗದು
ತಾಯಿ ಅನುವು ಜೊತೆಯಿದ್ದರೆ
ಏನೂ ಕಶ್ಟ ಬಾರದು

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: