ಅನುಮೋದಿಸು ಇನ್ನು ಈ ಅನುಬಂದವನ್ನು

– ಸುಹಾಸ್ ಮೌದ್ಗಲ್ಯ.

ಪ್ರೀತಿ, Love

ಕಿಡಿ ಕೆಂಡವೊಂದು ಇಡೀ ಕಾಡನ್ನು ಸುಟ್ಟ ಹಾಗೆ
ನಿನ್ನ ಕಣ್ಣೋಟವು ಸುಡುತಲಿದೆ ನನ್ನನು ಏಕೆ ಹೀಗೆ?
ಸಣ್ಣ ಬಿರುಕೊಂದು ದೊಡ್ಡ ಹಡಗನ್ನು ಮುಳುಗಿಸಿದ ಹಾಗೆ
ಕಿರುನಗೆಯಿಂದ ಮುಳುಗಿಸುವೆ ನನ್ನನ್ನು ಏಕೆ ಹೀಗೆ?

ಅನ್ವೇಶಿ ನಾನು ಸ್ವಲ್ಪ ಅನುಸರಿಸು ನೀನು
ಅನುಮೋದಿಸು ಇನ್ನು ಈ ಅನುಬಂದವನ್ನು

ಕಲ್ಲೊಂದು ಕನ್ನಡಿಯ ಚೂರು ಮಾಡಿದ ಹಾಗೆ
ನನ್ನ ಮನಸನ್ನು ಚೂರು ಮಾಡಿರುವೆ ಏಕೆ ಹೀಗೆ?
ಕತ್ತಲಿನ ದಾರಿಯಲ್ಲಿ ಸಣ್ಣ ಬೆಳಕೊಂದು ಸಿಕ್ಕಿದ ಹಾಗೆ
ಬರಿದಾದ ಬಾಳಲ್ಲಿ ಸಿಕ್ಕಿರುವೆ ನನಗೆ ಏಕೆ ಹೀಗೆ?

ಅನುಯಾಯಿ ನಾನು ನಿನ್ನ ಅನುಕರಿಸಲೇನು?
ಅನುಮೋದಿಸು ಇನ್ನು ಈ ಅನುಬಂದವನ್ನು

ಕಡಲ ಅಲೆಗಳಿಗಾಗಿ ಕಾಯುವ ತೀರದ ಹಾಗೆ
ಹಗಲಿರುಳು ಕಾಯುತಿರುವೆ ನಿನಗಾಗಿ ಹೀಗೆ
ಬಂದೊಮ್ಮೆ ತಣಿಸು ನನ್ನ ಹ್ರುದಯದ ಬೇಗೆ
ಮಳೆ ಸುರಿದು ಇಳೆಯನು ತಣಿಸಿದ ಹಾಗೆ

ಅನುರಾಗಿ ನಾನು ನನ್ನ ಅನುರಾಗಿಣಿ ನೀನು
ಅನುಮೋದಿಸು ಇನ್ನು ಈ ಅನುಬಂದವನ್ನು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: