ಪ್ರತಿ ಕ್ಶಣವೂ ಸುಂದರತೆಯ ಆಹ್ವಾನ

– ಸವಿತಾ.

ನಿನ್ನ ಕಂಗಳ ಕಾಂತಿಯಲಿ
ನನ್ನೊಲವಿನ ಬೆಳಕು ಮೂಡಿರಲು

ನಿನ್ನ ಅರಳಿದ ಮನದಲಿ
ನನ್ನುಸಿರು ಬೆರೆತಿರಲು

ನೀ ಇಡುವ ಹೆಜ್ಜೆಯಲಿ
ನನ್ಹೆಜ್ಜೆ ಜೊತೆಯಾಗಿರಲು

ಬಾಳ ಪಯಣದಲಿ ಸುಕ ದುಕ್ಕದಲಿ
ಸಂಗಾತಿಯಾಗಿ ನೀನಿರಲು

ನಿನ್ನ ಮದುರ ಸಾಂಗತ್ಯದಲಿ
ನಾ ರಾಣಿಯಾಗಿರಲು

ಪ್ರತಿ ಕ್ಶಣವೂ
ಸುಂದರತೆಯ ಆಹ್ವಾನವು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: