ಸಿಹಿ ಪ್ರಿಯರಿಗೆ ಗೋದಿ ಹುಗ್ಗಿ

– ಸವಿತಾ.

ಗೋದಿ ಹುಗ್ಗಿ, Wheat huggi, Sweet

ಬೇಕಾಗುವ ಪದಾರ‍್ತಗಳು:

 • 1/4 ಕೆಜಿ ಪಾಲಿಶ್ ಮಾಡಿದ ಗೋದಿ
 • 1/4 ಕೆಜಿ ಬೆಲ್ಲ
 • 1 ಚಮಚ ಗಸಗಸೆ
 • 8 ಏಲಕ್ಕಿ
 • 2 ಲವಂಗ
 • 1/4 ಬಾಗ ಜಾಯಿಕಾಯಿ
 • 2 ಚಮಚ ಒಣ ಕೊಬ್ಬರಿ ತುರಿ
 • 6 ಗೋಡಂಬಿ

ಮಾಡುವ ಬಗೆ:

 • ಗೋದಿಯನ್ನು ಹಿಂದಿನ ದಿನ ರಾತ್ರಿ ನೀರಲ್ಲಿ ನೆನೆ ಇಡುವುದು.
 • ಮರುದಿನ ಬೆಳಿಗ್ಗೆ ಕುಕರ್ ನಲ್ಲಿ ಗೋದಿಗೆ 6 ಲೋಟ ನೀರು ಹಾಕಿ 12 ವಿಶಲ್ ಕೂಗಿಸಿರಿ.
 • ಆರಿದ ನಂತರ ಗೋದಿಯನ್ನು, ಕೈಯಿಂದ ಅತವಾ ಬೇಳೆ ಅರಿಯುವ ಕಟ್ಟಿಗೆ ಚಮಚದಿಂದ ಮಸೆಯಿರಿ.
 • ಬೆಲ್ಲ ಸೇರಿಸಿ ಒಲೆ ಮೇಲೆ ಕುದಿಯಲು ಇಡಿ.
 • ಬೆಲ್ಲ ಕರಗಿ ನೀರಾಗಿ ಗೋದಿ ಜೊತೆ ಹೊಂದಲು ಒಂದು ಕುದಿ ಕುದಿಸಿ.
 • ಗಸಗಸೆ, ಏಲಕ್ಕಿ, ಲವಂಗ, ಜಾಯಿಕಾಯಿ ಸ್ವಲ್ಪ ಹುರಿದು ಪುಡಿ ಮಾಡಿ ಹಾಕಿ.
 • ಒಣಕೊಬ್ಬರಿ ತುರಿ ಹಾಕಿ ಕೈಯಾಡಿಸಿ.
 • ಗೋಡಂಬಿಯಿಂದ ಅಲಂಕರಿಸಿ ಗೋದಿ ಹುಗ್ಗಿ ತಿನ್ನಲು ಕೊಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: