ಕರಿದ ರೊಟ್ಟಿ ಮಾಡೋದು ಹೇಗೆ?

– ಕಲ್ಪನಾ ಹೆಗಡೆ.

ಕರಿದ ರೊಟ್ಟಿ, fried rotti

ಏನೇನು ಬೇಕು? 

  • 1/2 ಕೆ.ಜಿ ಅಕ್ಕಿ ಹಿಟ್ಟು
  • 4 ಈರುಳ್ಳಿ
  • 5 ಹಸಿಮೆಣಸಿನಕಾಯಿ
  • 2 ಚಮಚ ಸಾರಿನ ಪುಡಿ
  • 1 ಚಮಚ ಗರಮ್ ಮಸಾಲಾ ಪುಡಿ
  • ಕರಿಬೇವು, ಕೊತ್ತಂಬರಿ ಸೊಪ್ಪು
  • ಎಣ್ಣೆ
  • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:

  • ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟನ್ನು ಹಾಕಿಕೊಳ್ಳಿ.
  • ಅದಕ್ಕೆ ಬೇಕಾಗುವಶ್ಟು ನೀರನ್ನು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ.
  • ಆಮೇಲೆ ಹೆಚ್ಚಿದ ಈರುಳ್ಳಿ, ಸಾರಿನಪುಡಿ, ಗರಮ್ ಮಸಾಲೆ ಪುಡಿ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  • ಆಮೇಲೆ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾದ ಬಳಿಕ ನಿಮ್ಮ ಅಂಗೈಗೆ ಸ್ವಲ್ಪ ಎಣ್ಣೆ ಸವರಿ ಕಲಸಿಟ್ಟ ಹಿಟ್ಟನ್ನು ಸ್ವಲ್ಪ ತಗೊಂಡು ಇನ್ನೊಂದು ಕೈಯಿಂದ ತೆಳ್ಳಗೆ ತಟ್ಟಿ ಬಾಣಲೆಯಲ್ಲಿ ಬಿಡಿ.
  • ಜಾಲಿಸೌಟಿನಿಂದ ತಿರುಗಿಸಿ ಎರಡೂ ಕಡೆ ಬೇಯಿಸಿಕೊಳ್ಳಿ.

ನೀವು ಮಾಡಿದ ಕರಿದ ರೊಟ್ಟಿಯನ್ನು ಟೊಮೇಟೊ ಸಾಸು ಅತವಾ ಕಾಯಿ ಚಟ್ನಿಯೊಂದಿಗೆ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: