ಕಿರುದಾನ್ಯದ ಅಡುಗೆ – ಜೋಳದ ವಡೆ

–  ಸವಿತಾ.

ಜೋಳದ ವಡೆ Vade

ಬೇಕಾಗುವ ಸಾಮಾಗ್ರಿಗಳು

1 ಲೋಟ ಜೋಳದ ಹಿಟ್ಟು
2 ಟೀ ಚಮಚ ಕಡಲೆಹಿಟ್ಟು
2 ಟೀ ಚಮಚ ಉದ್ದಿನ ಹಿಟ್ಟು
2 ಟೀ ಚಮಚ ಗೋದಿ ಹಿಟ್ಟು
1/2 ಚಮಚ ಅಜವಾನ/ಓಮಿನ ಕಾಳು
1/2 ಚಮಚ ಜೀರಿಗೆ
1 ಚಮಚ ಉಪ್ಪು
4 ಬೆಳ್ಳುಳ್ಳಿ ಎಸಳು
6 ಹಸಿಮೆಣಸಿನಕಾಯಿ
5-6 ಕರಿಬೇವು ಎಲೆ
2 ಕಡ್ಡಿ ಕೊತ್ತಂಬರಿ ಸೊಪ್ಪು
ಕರಿಯಲು ಎಣ್ಣೆ

ಮಾಡುವ ಬಗೆ

  • ಮೇಲೆ ಹೇಳಿದ ಜೋಳ, ಕಡಲೆ, ಉದ್ದು ಹಾಗೂ ಗೋದಿ ಹಿಟ್ಟುಗಳನ್ನು ಸೇರಿಸಿ ಜರಡಿ ಹಿಡಿದು ಇಟ್ಟುಕೊಳ್ಳಿ.
  • ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಗಟ್ಟಿ ಬರುವಂತೆ ನಾದಿಕೊಂಡು 8 ರಿಂದ 10 ತಾಸು ಇಡಬೇಕು, ಇಲ್ಲವೇ ಇರುಳಲ್ಲಿ ನಾದಿ ಒಂದು ತಟ್ಟೆ ಮುಚ್ಚಿಡಿ.
  • ಬೆಳಗ್ಗೆ ಇಲ್ಲವೇ 10 ತಾಸು ಕಳೆದ ಬಳಿಕ ಹಸಿ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ಅಜವಾನ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಎಲ್ಲವನ್ನು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ.
  • ರುಬ್ಬಿದ ಮಸಾಲೆಯನ್ನು ಹಿಟ್ಟಿಗೆ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
  • ಒಂದು ನಿಂಬೆ ಹಣ್ಣು ಅಳತೆಯ ಹಿಟ್ಟು ತೆಗೆದುಕೊಂಡು, ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಸ್ವಲ್ಪ ನೀರು ಹಚ್ಚಿ ದುಂಡಾಗಿ ಪೂರಿ ಅಳತೆಯಶ್ಟು ಅಗಲ ತಟ್ಟಿ. ಕೈಗೆ ಹಿಟ್ಟು ಅಂಟಿಕೊಳ್ಳದಿರಲು ಕೈಯನ್ನು ನೀರಿನಲ್ಲಿ ಅದ್ದಿ ತೆಗೆದು ಹಿಟ್ಟನ್ನು ತಟ್ಟಿ ವಡೆ ತಯಾರಿಸಿರಿ.
  • ಬಳಿಕ ಕಾದ ಎಣ್ಣೆಯಲ್ಲಿ ಒಂದೊಂದೇ ವಡೆಯನ್ನು ಕರಿದು ತೆಗೆಯಿರಿ.

ಜೋಳದ ವಡೆಯನ್ನು ಮೊಸರು ಹಾಗೂ ಚಟ್ನಿ, ಇಲ್ಲವೇ ಆಲೂಗಡ್ಡೆ ಪಲ್ಯದ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.

(ಚಿತ್ರ ಸೆಲೆ: ಸವಿತಾ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: