ಉದ್ದಿನ ಗೇಟಿ
– ಸವಿತಾ.
ಏನೇನು ಬೇಕು?
- 1/4 ಕೆಜಿ ಉದ್ದಿನಕಾಳು
- 10 ಹಸಿ ಮೆಣಸಿನಕಾಯಿ
- 1 ಚಮಚ ಜೀರಿಗೆ
- 10 ಬೆಳ್ಳುಳ್ಳಿ ಎಸಳು
- 1 ಚಮಚ ಅತವಾ ರುಚಿಗೆ ತಕ್ಕಶ್ಟು ಉಪ್ಪು
ಮಾಡುವ ಬಗೆ
- ಉದ್ದಿನಕಾಳು ಸಿಪ್ಪೆ ಸಮೇತ ಗಿರಣಿಯಲ್ಲಿ ಹಿಟ್ಟು ಮಾಡಿಸಿಕೊಳ್ಳಬೇಕು
- ಹಸಿ ಮೆಣಸಿನಕಾಯಿ, ಜೀರಿಗೆ, ಉಪ್ಪು, ಬೆಳ್ಳುಳ್ಳಿ ಎಸಳು ಪೇಸ್ಟ್ ಮಾಡಿಕೊಂಡು, ನೀರು ಸೇರಿಸಿ ಹಿಟ್ಟನ್ನು ಗಟ್ಟಿಯಾಗಿ ನಾದಿಕೊಳ್ಳಿ
- ಹಿಟ್ಟನ್ನು ಲಟ್ಟಿಸಿ ಅತವಾ ರೊಟ್ಟಿ ಹಾಗೇ ಕೈಯಲ್ಲಿ ತಟ್ಟಿ, ಕಾದ ತವೆಯ ಮೇಲೆ ಎರಡೂ ಬದಿ ಬೇಯಿಸಿರಿ
- ಆಮೇಲೆ ಅದನ್ನು ಮುರಿದು ಸಂಡಿಗೆಯ ಹಾಗೆ, ಯಾವುದೇ ಸಿಹಿ ಅತವಾ ಅನ್ನ ಸಾರು ಜೊತೆ ತಿನ್ನಲು ಕೊಡಿ
ಉದ್ದಿನ ಗೇಟಿಯನ್ನು ವಿಶೇಶವಾಗಿ ಗೋದಿ ಹುಗ್ಗಿ ಜೊತೆ ತಿನ್ನಲು ಮಾಡುತ್ತಾರೆ.
ಇತ್ತೀಚಿನ ಅನಿಸಿಕೆಗಳು