ಶೇಂಗಾ ಉಂಡೆ
– ಸವಿತಾ.
ಏನೇನು ಬೇಕು?
- 1 ಬಟ್ಟಲು ಶೇಂಗಾ
- 3/4 ಬಟ್ಟಲು ಬೆಲ್ಲ
- 1 ಚಮಚ ಗಸಗಸೆ
- ಏಲಕ್ಕಿ ಪುಡಿ
ಮಾಡುವ ಬಗೆ
- ಶೇಂಗಾಕಾಳುಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯರಿ
- ಚಾಪೆಯನ್ನು ಅತವಾ ಒಣ ಬಟ್ಟೆಯನ್ನು ಹಾಸಿ ಹುರಿದ ಶೇಂಗಾಕಾಳುಗಳನ್ನು ಹಾಕಿರಿ
- ಶೇಂಗಾಕಾಳುಗಳು ತುಸು ಆರಿದ ಮೇಲೆ ಕಾಳುಗಳನ್ನು ಒಡೆಯಿರಿ
- ಬಳಿಕ ಕಾಳುಗಳನ್ನು ಮೊರದಲ್ಲಿ ಕೇರಿ ಸಿಪ್ಪೆ ಮತ್ತು ಕಾಳುಗಳನ್ನು ಬೇರೆ ಮಾಡಿ
- ಬೆಲ್ಲಕ್ಕೆ, ತೋಯುವಶ್ಟು ಅತವಾ ನಾಲ್ಕು ಚಮಚ ನೀರು ಹಾಕಿ ಕುದಿಯಲು ಇಡಿ.
- ಏರುಪಾಕ ಬರುವಶ್ಟು ಕುದಿಸಿ ಇಳಿಸಿ, ಏಲಕ್ಕಿ ಪುಡಿ ಹಾಕಿ ಮತ್ತು ಗಸಗಸೆ ಸೇರಿಸಿ
- ನಂತರ ಶೇಂಗಾಕಾಳು ( ಕಡಲೆಬೀಜ) ಹಾಕಿ ಚೆನ್ನಾಗಿ ತಿರುಗಿಸಿ.
- ತಣ್ಣೀರಿನಲ್ಲಿ ಕೈ ಅದ್ದಿ ಒಂದೊಂದೇ ಉಂಡೆ ಕಟ್ಟಿರಿ. ಈಗ ಶೇಂಗಾ ಉಂಡೆ ರೆಡಿ 🙂
ಒಂದು ತಟ್ಟೆಗೆ ತುಪ್ಪ ಸವರಿ, ಪಾಕದಲ್ಲಿರುವ ಶೇಂಗಾಕಾಳನ್ನು ತಟ್ಟೆಗೆ ಹಾಕಿ, ಚಿಕ್ಕ ಚಿಕ್ಕ ಚೌಕಗಳಾಗಿ ಕತ್ತರಿಸಿ, ಶೇಂಗಾ ಚಿಕ್ಕಿ ಕೂಡ ಮಾಡಬಹುದು 🙂
ಇತ್ತೀಚಿನ ಅನಿಸಿಕೆಗಳು