ಮರೆಯಾಗಿ ಹೋದ ಅನಾಮಿಕ

– ವಿನು ರವಿ.

ನವಿಲು ಗರಿ

ಎಲ್ಲಿಂದಲೋ ತೂರಿ ಬಂತಾ
ವೇಣುಗಾನ
ಮುರಳಿಯ ಮದುರನಾದಕೆ
ಇನ್ನಶ್ಟು ಚೆಲುವಾಯಿತು
ಉದ್ಯಾನವನ

ಮೋಹಕ ಗಾನಸುದೆಗೆ
ಮರುಳಾಯಿತು ಹ್ರುನ್ಮನ
ತುಂಬಿದ ಹಸಿರ ಸಿರಿಯ ನಡುವೆ
ಕಂಡೆನಾ ಗೊಲ್ಲನಾ

ಆಲಿಸುತಾ ನಿಂತಾ ಪತಿಕರೆಲ್ಲಾ
ಮೌನ ದ್ಯಾನ
ಹೊತ್ತು ಮುಳುಗಿದರೂ ಕೊಳಲ
ಸಿರಿಗಾನಕೆ ಕದಲದ ರಸಿಕ ಜನ

ಮೈಮರೆತು ತಲೆದೂಗಿರಲು
ಮರೆಯಾಗಿ ಹೋದ
ಅನಾಮಿಕನ
ಕಿನ್ನರಲೋಕವ ಸ್ರುಶ್ಟಿಸಿದವನ
ಕಾಣದೆ ನೊಂದ ಜನ
ಮೋಹನ ತೊರೆದ ರಾದೆಯ ತೆರದಿ
ಮೂಕವಾಯಿತು ಹೂಬನ…

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: