ದಾರವಾಡ ಪೇಡಾ
– ಸವಿತಾ.
ಏನು ಬೇಕು?
- 1 ಲೀಟರ್ ಹಾಲು
- 3 ಚಮಚ ಸಕ್ಕರೆ
- 3 ಚಮಚ ತುಪ್ಪ
- ಏಲಕ್ಕಿ ಪುಡಿ
- ಸಕ್ಕರೆ ಪುಡಿ
ಮಾಡುವ ಬಗೆ
- ಹಾಲು ಕಾಯಿಸಿ ಅದಕ್ಕೆ ನಿಂಬೆ ಹಣ್ಣು ರಸ ಹಿಂಡಿ ಹಾಲು ಒಡೆಸಿ ನೀರು ತೆಗೆಯಿರಿ
- ಒಂದು ತೆಳುವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ, ಹಿಂಡಿ, ನೀರು ತೆಗೆಯಿರಿ
- ಈ ಪನೀರನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ
- ಸಣ್ಣ ಉರಿಯಲ್ಲಿ ಇಟ್ಟು, 2 ಚಮಚ ಸಕ್ಕರೆ, 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಿರಿ
- ತಳ ಹಿಡಿದಾಗ ಹಾಲು ಮತ್ತು ತುಪ್ಪ ಹಾಕಿ ಚೆನ್ನಾಗಿ ತಿರುವಿರಿ
- ಸಕ್ಕರೆ, ತುಪ್ಪ, ಹಾಲು ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೂ ಹಾಗೂ ಕಂದು ಬಣ್ಣ ಬರುವವರೆಗೆ ತಿರುವಿ ಹಾಕಿ, ಒಲೆ ಆರಿಸಿ
- ಏಲಕ್ಕಿ ಪುಡಿಯನ್ನು ತಿರುವಿ ಇಟ್ಟ ಪೇಡಾ ಮಿಶ್ರಣಕ್ಕೆ ಹಾಕಿ ಕೈಯಾಡಿಸಿ,
- ದುಂಡಾಗಿ ಅತವಾ ಉದ್ದ ಆಕಾರದಲ್ಲಿ ಪೇಡಾ ಮಾಡಿ, ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ ಒಂದೊಂದೇ ತೆಗೆದಿಡಿ.
ಈಗ ರುಚಿಯಾದ ದಾರವಾಡ ಪೇಡಾ ತಿನ್ನಲು ರೆಡಿ 🙂
ಇತ್ತೀಚಿನ ಅನಿಸಿಕೆಗಳು